ನಕ್ಸಲ್‌ ನಾಯಕ ಬಿ.ಜಿ. ಕೃಷ್ಣಮೂರ್ತಿ ಇಂದು ಕೋರ್ಟ್‌ಗೆ ಹಾಜರು

ಹೊಸದಿಗಂತ, ಶಿವಮೊಗ್ಗ:

ಕೇರಳದಲ್ಲಿ ಬಂಧಿತನಾಗಿರುವ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಶಿವಮೊಗ್ಗ ನ್ಯಾಯಾಲಯಕ್ಕೆ ಬುಧವಾರ ಹಾಜರುಪಡಿಸಲಾಗಿದೆ.

ಈತನ ಮೇಲೆ ತೀರ್ಥಹಳ್ಳಿಯ 2 ಹಾಗೂ ಆಗುಂಬೆ ಠಾಣೆಯಲ್ಲಿ 3 ಕೇಸುಗಳಿದ್ದು ಇವುಗಳ ವಿಚಾರಣೆಯ ಸಂಬಂಧ ಜಿಲ್ಲಾ ನ್ಯಾಯಾಲಯಕ್ಕೆ ಕರೆ ತರಲಾಗಿದೆ.

2021 ರಲ್ಲಿ ಕೇರಳ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ನಕ್ಸಲ್ ಕೃಷ್ಣಮೂರ್ತಿ ಕೇರಳದ ತ್ರಿಶೂರ್ ಜಿಲ್ಲೆಯ ವಿಯೂರ್ ನ ಜೈಲಿನಲ್ಲಿ ಇಡಲಾಗಿತ್ತು. ಶೃಂಗೇರಿ ಸಮೀಪದ‌ ಬುಕಡಿಬೈಲು ನಿವಾಸಿ. 2000 ರಲ್ಲಿ ಮಾವೋವಾದಿ ಸಂಟನೆಯೊಂದಿಗೆ ಗುರುತಿಸಿಕೊಂಡು ಕಾಡು ಸೇರಿದ್ದ.‌‌

ಚಿಕ್ಕಮಗಳೂರು ಜಿಲ್ಲೆಯಲ್ಲಿ‌ ನಡೆದ ಎನ್ ಕೌಂಟರ್ ನಲ್ಲಿ ಸಾಕೇತರಾಜನ್ ಹತ್ಯೆಯ ಬಳಿಕ ಕೃಷ್ಣಮೂರ್ತಿ ನಾಯತ್ವ ವಹಿಸಿಕೊಂಡಿದ್ದ. ಆಗುಂಬೆ‌ಯ‌ ಬರ್ಕಣ ಫಾಲ್ಸ್ ಬಳಿ‌ ನಡೆದ ಗುಂಡಿನ‌ ಚಕಮಕಿಯಲ್ಲಿ ಗಾಯಗೊಂಡ ಬಳಿಕ ಈತ ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಈತ ಬಂಧನಕ್ಕೆ ಒಳಗಾಗಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!