ಹೊಸದಿಗಂತ ವರದಿ, ಮಡಿಕೇರಿ:
ನಕ್ಸಲ್ ನಾಯಕ ರೂಪೇಶ್’ನನ್ನು ಗುರುವಾರ ಮಡಿಕೇರಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಕೊಡಗಿನ ಭಾಗಮಂಡಲ ವ್ಯಾಪ್ತಿಯಲ್ಲಿ 2008ರಲ್ಲಿ ಕಾಣಿಸಿಕೊಂಡಿದ್ದ ಆರೋಪದಡಿ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಕೇರಳದ ಜೈಲಿನಲ್ಲಿದ್ದ ರೂಪೇಶ್’ನನ್ನು ಕೊಡಗು ಹಾಗೂ ಕೇರಳ ಪೊಲೀಸರು ಹಾಜರುಪಡಿಸಿದರು.
ಬುಧವಾರ ಕೇರಳದಿಂದ ಕರೆತರಲಾಗಿದ್ದ ರೂಪೇಶ್’ನನ್ನು ರಾತ್ರಿ ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿತ್ತು.
ಗುರುವಾರ ಬಿಗಿ ಭದ್ರತೆಯಲ್ಲಿ ಮಡಿಕೇರಿ ನ್ಯಾಯಾಲಯಕ್ಕೆ ಆತನನ್ನು ಹಾಜರುಪಡಿಸಲಾಗಿದ್ದು, ನ್ಯಾಯಾಲಯದಲ್ಲಿ ತನ್ನ ಪರವಾಗಿ ತಾನೇ ವಾದ ಮಂಡಿಸಿದನು. ಅಲ್ಲದ ನ್ಯಾಯಾಲಯದ ಹೊರ ಭಾಗದಲ್ಲಿ ‘ನಕ್ಸಲಿಸಂ’ ಪರವಾದ ಘೋಷಣೆಗಳನ್ನು ಕೂಗಿ ಗಮನಸೆಳೆದನು.