ನಕ್ಸಲೀಯರು ಶಸಾಸ್ತ್ರ ತ್ಯಜಿಸಿ ಶರಣಾಗಿ, ಇಲ್ಲವೇ ಕಠಿಣ ಶಿಕ್ಷೆ ಎದುರಿಸಿ: ಅಮಿತ್ ಶಾ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ನಕ್ಸಲೀಯರು ಶಸಾಸ್ತ್ ತ್ಯಜಿಸಿ ಸಮಾಜದ ಮುಖ್ಯ ವಾಹಿನಿಗೆ ಸೇರ್ಪಡೆಯಾಗಿ, ಇಲ್ಲವೇ ಭದ್ರತಾ ಪಡೆಗಳಿಂದ ಕಠಿಣ ಶಿಕ್ಷೆ ಎದುರಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಖಡಕ್ ಸೂಚನೆ ನೀಡಿದ್ದಾರೆ.

ಛತ್ತೀಸ್ ಗಢದ ಜಗ್ದಾಲ್ ಪುರದಲ್ಲಿ ನಡೆದ ‘ಬಸ್ತಾರ್ ಒಲಂಪಿಕ್ಸ್ ‘ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತ್ ಶಾ, ಮಾರ್ಚ್ 2026ರೊಳಗೆ ದೇಶವನ್ನು ನಕ್ಸಲ್ ಮುಕ್ತಗೊಳಿಸಲಾಗುವುದು, ನಕ್ಸಲೀಯರು ಶಸಾಸ್ತ್ರ ತ್ಯಜಿಸಿ ಶರಣಾಗಿ, ಸಮಾಜದ ಮುಖ್ಯ ವಾಹಿನಿಗೆ ಸೇರಿ, ಅಂತಹವರಿಗೆ ಪುನರ್ವಸತಿ ಕಲ್ಪಿಸುವುದು ನಮ್ಮ ಜವಾಬ್ದಾರಿಯಾಗಿದೆ. ನಮ್ಮ ಮನವಿಯನ್ನು ಕೇಳದಿದ್ದರೆ ಭದ್ರತಾ ಪಡೆಗಳು ಅವರನ್ನು ನಿರ್ಮೂಲನೆ ಮಾಡಲಿದ್ದಾರೆ ಎಂದರು.
ಮಾರ್ಚ್ 31, 2026ರೊಳಗೆ ದೇಶವನ್ನು ನಕ್ಸಲ್ ಮುಕ್ತಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆ ಈಡೇರಿಸಲು ಛತ್ತೀಸ್ ಗಢ ಪೊಲೀಸರು ಬದ್ಧರಾಗಿದ್ದಾರೆ. ಛತ್ತೀಸ್ ಗಢದ ಪುನರ್ವಸತಿ ನೀತಿ ದೇಶದಲ್ಲಿಯೇ ಅತ್ಯುತ್ತಮವಾಗಿದೆ. ನೀವು ಶರಣಾಗಿ ಸಮಾಜದ ಮುಖ್ಯವಾಹಿನಿಗೆ ಸೇರಿದ್ದಲ್ಲಿ ಛತ್ತೀಸ್ ಗಢ ಹಾಗೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದಂತಾಗುತ್ತದೆ ಎಂದು ಅವರು ಹೇಳಿದರು.

ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ನಕ್ಸಲೀಯರ ವಿರುದ್ಧ ಕ್ರಮ ಕೈಗೊಳ್ಳಲು ಉದಾಸೀನತೆ ಅನುಸರಿಸಲಾಗುತಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಳೆದ ಒಂದು ವರ್ಷದ ಅವಧಿಯಲ್ಲಿಯೇ 287 ನಕ್ಸಲೀಯರನ್ನು ಹತ್ಯೆ ಮಾಡಲಾಗಿತ್ತು 992 ನಕ್ಸಲೀಯರನ್ನು ಬಂಧಿಸಲಾಗಿದೆ. 836 ನಕ್ಸಲೀಯರು ಶರಣಾಗಿದ್ದಾರೆ ಎಂದು ಅವರು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here