ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೂಮಿಯ ಮೇಲೆ ನೊಣಗಳಿಲ್ಲದ ಸ್ಥಳವಿಲ್ಲ. ನೊಣಗಳಿಂದ ಅನೇಕ ಆರೋಗ್ಯ ಸಮಸ್ಯೆಗಳ ಕಾರಣದಿಂದ ಮಾನವರಿಗೆ ನೊಣ ಶತ್ರುಗಳೆಂದೇ ಹೇಳಬಹುದು. ಆದರೆ, ನೊಣಗಳು ಪ್ರಕೃತಿಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಇದು ಸಸ್ಯಗಳು ಹೂವುಗಳು ಮತ್ತು ಹಣ್ಣುಗಳನ್ನು ಉತ್ಪಾದಿಸುವಂತೆ ಮಾಡುತ್ತದೆ. ಸಾವಯವ ಪದಾರ್ಥವು ಸಸ್ಯಗಳಿಗೆ ಲಭ್ಯವಾಗುವಂತೆ ಮಾಡುತ್ತದೆ.
ತ್ವರಿತ ಬೆಳವಣಿಗೆ: ನೊಣಗಳು ಬೇಗನೆ ಬೆಳೆಯುತ್ತವೆ. ಪ್ರತಿ ನೊಣವು 4 ದಿನಗಳಲ್ಲಿ 500 ಮೊಟ್ಟೆಗಳನ್ನು ಇಡುತ್ತದೆ. ಒಂದು ವಾರದೊಳಗೆ ಅವು ನೊಣಗಳಾಗುತ್ತವೆ. ಪ್ರತಿ ನೊಣವು 25 ದಿನಗಳವರೆಗೆ ಬದುಕಬಲ್ಲದು.
ರೋಗದ ಅಂಶಗಳು: ನೊಣಗಳು 65 ಬಗೆಯ ರೋಗಗಳನ್ನು ಹರಡುತ್ತವೆ. ಅತಿಸಾರ, ಕಾಲರಾ, ಟೈಫಾಯಿಡ್, ಕುಷ್ಠರೋಗ, ಆಂಥ್ರಾಕ್ಸ್, ಕ್ಷಯ ಇತ್ಯಾದಿ
ಕಾಲುಗಳೊಂದಿಗೆ ರುಚಿ: ನೊಣಗಳು ತಮ್ಮ ಕಾಲುಗಳಿಂದ ರುಚಿಯನ್ನು ಅರಿಯುತ್ತವೆ. ತಮ್ಮ ಕಾಲುಗಳ ಮೇಲೆ ಸಂವೇದಕಗಳನ್ನು ಹೊಂದಿದ್ದು, ಮನುಷ್ಯನ ನಾಲಿಗೆಯ ರುಚಿ ಮೊಗ್ಗುಗಳಂತಿರುತತ್ತವೆ.
ವಿಚಿತ್ರ: ಸಂಭೋಗದ ಸಮಯದಲ್ಲಿ, ಗಂಡು ನೊಣ ಹೆಣ್ಣು ನೊಣದ ದೇಹಕ್ಕೆ ವೀರ್ಯದ ಜೊತೆಗೆ ಪೆಪ್ಟೈಡ್ ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡುತ್ತವೆ. ಹೀಗಾಗಿ ಹೆಣ್ಣು ನೊಣ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುತ್ತದೆ. ಆಗ ಇತರ ಗಂಡು ನೊಣಗಳು ಅದರ ಹತ್ತಿರ ಸುಳಿಯುವುದಿಲ್ಲ.
ಸಸ್ಯಗಳಿಗೆ ಒಳ್ಳೆಯದು: ಕೆಲವು ವಿಧದ ನೊಣಗಳು ಪರಾಗವನ್ನು ಸಸ್ಯಗಳಿಂದ ಇತರ ಸಸ್ಯಗಳಿಗೆ ಸಾಗಿಸುತ್ತವೆ. ಇದರಿಂದ ಹೂವು, ಹಣ್ಣುಗಳು ಬರುತ್ತವೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.