ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮಹಾರಾಷ್ಟ್ರ ರಾಜ್ಯಾಧ್ಯಕ್ಷ ಸುನಿಲ್ ತಟ್ಕರೆ ಬುಧವಾರ ಎನ್‌ಸಿಪಿ (ಎಪಿ) 38 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದಾರೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬಾರಾಮತಿ ಕ್ಷೇತ್ರದಿಂದ ಶರದ್ ಪವಾರ್ ಬಣದಿಂದ ಸ್ಪರ್ಧಿಸಿರುವ ತಮ್ಮ ಸೋದರಳಿಯ ಯುಗೇಂದ್ರ ಪವಾರ್ ವಿರುದ್ಧ ಕಣಕ್ಕಿಳಿದಿದ್ದಾರೆ.
ಅಜಿತ್ ಪವಾರ್ ಅವರು ಆಡಳಿತ ಪಾಳಯಕ್ಕೆ ಸೇರಿದಾಗ ಅವರ ಪರವಾಗಿದ್ದ ಸಚಿವರು ಸೇರಿದಂತೆ 26 ಹಾಲಿ ಶಾಸಕರಿಗೆ ಮತ್ತೆ ಮಣೆ ಹಾಕಲಾಗಿದೆ. ಇತ್ತೀಚೆಗೆ ಕಾಂಗ್ರೆಸ್‌ನಿಂದ ಬಂದಿದ್ದ ಹಾಲಿ ಶಾಸಕರಾದ ಸುಲ್ಭಾ ಖೋಡ್ಕೆ (ಅಮರಾವತಿ) ಮತ್ತು ಹಿರಾಮನ್ ಖೋಸ್ಕರ್ (ಇಗತ್‌ಪುರಿ) ಅವರು ಎನ್‌ಸಿಪಿಯಿಂದ ಸ್ಪರ್ಧಿಸಲಿದ್ದಾರೆ.