ಹೊಸದಿಗಂತ ಡಿಜಿಟಲ್ ಡೆಸ್ಕ್:
ಎನ್ ಡಿಎ ಸಂಸದ ಸಭೆ ನರೇಂದ್ರ ಮೋದಿಯವರ ನಿವಾಸದಲ್ಲಿ ನಡೆಯಿತು. ಈ ಸಭೆಯಲ್ಲಿ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು, ಶಿಂಧೆ ಬಣದಿಂದಲೂ ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ರಚಿಸೋದಕ್ಕೆ ಬೆಂಬಲ ನೀಡಿ, ಅಧಿಕೃತ ಪತ್ರ ನೀಡಿದ್ದಾರೆ.
ಈ ವೇಳೆ ನರೇಂದ್ರ ಮೋದಿ ಅವರನ್ನು ಎನ್ಡಿಎ ಸಭೆಯಲ್ಲಿ ಸಂಸದೀಯ ನಾಯಕರನ್ನಾಗಿ ನಿರ್ಣಯ ಮಾಡಲಾಗಿದೆ. ಅದರೊಂದಿಗೆ ಅವರೇ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡೋದು ಖಚಿತವಾಗಿದೆ. ಜೂನ್ 7 ಅಥವಾ 8 ರಂದು ಸಂಜೆ 5 ಗಂಟೆಗೆ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಸಭೆಯಲ್ಲಿ ಎಲ್ಲಾ ನಾಯಕರು ಮೋದಿ ನಾಯಕತ್ವಕ್ಕೆ ಬಹುಪರಾಕ್ ಎಂದಿದ್ದಾರೆ. ‘ನರೇಂದ್ರ ಮೋದಿ ಪ್ರಧಾನಿಯಾಗಲಿ. ನಮ್ಮ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಾಧ್ಯವಾದಷ್ಟು ಬೇಗ ಸರ್ಕಾರ ರಚನೆಯಾಗಲಿ. ಸರ್ಕಾರ ರಚನೆಯಲ್ಲಿ ವಿಳಂಬ ಧೋರಣೆ ಬೇಡ ಎಂದು ನಿತೀಶ್ ಕುಮಾರ್ ಸಲಹೆ ನೀಡಿದ್ದಾರೆ.
ಖಾತೆ ಹಂಚಿಕೆ ಬಗ್ಗೆ ಬೇಡಿಕೆ ಇದ್ದರೂ ಸಹ ಸರ್ಕಾರ ರಚನೆಗೆ ಮುಖ್ಯ ಎಂದು ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ. ಎನ್ಡಿಎ ಸರ್ಕಾರ ರಚನೆಗೆ ಒಕ್ಕೂಟದ ನಾಯಕರು ಗ್ರೀನ್ ಸಿಗ್ನಲ್ ನೀಡಿದ್ದಾರೆ.
NDA ಮೈತ್ರಿಕೂಟದ ಸರ್ಕಾರ ರಚನೆಗೆ ಸರ್ವಾನುಮತದಿಂದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಒಂದೇ ಲೈನ್ ರೆಸಲ್ಯೂಷನ್ ಗೆ ಎಲ್ಲಾ ನಾಯಕರು ಒಪ್ಪಿಗೆ ನೀಡಿದ್ದಾರೆ. ಈ ಮೂಲಕ ಎಲ್ಲಾ ನಾಯಕರಿಂದ ಪತ್ರಕ್ಕೆ ಸಹಿ ಹಾಕಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೆ ಬೆಂಬಲ ಪತ್ರದ ಜೊತೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗುವ ಸಾಧ್ಯತೆ ಇದೆ. ಸಂಜೆ 7.30 ಕ್ಕೆ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್ ಡಿ ಎ ಮೈತ್ರಿಕೂಟದ ನಾಯಕರು ಮುರ್ಮು ಭೇಟಿಯಾಗಬಹುದು ಎನ್ನಲಾಗಿದೆ.