ಎನ್‌ಡಿಎ ಮೈತ್ರಿಕೂಟ ಅಲ್ಲ …’ಪರಿವಾರ ಮಂಡಲ’: ರಾಹುಲ್‌ ಗಾಂಧಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:  

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹೊಸ ಸರ್ಕಾರದ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದು, ಎನ್‌ಡಿಎ ಮೈತ್ರಿಕೂಟವನ್ನು ‘ಪರಿವಾರ ಮಂಡಲ’ ಎಂದು ಕರೆದಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ತಲೆಮಾರುಗಳ (ಕಾಂಗ್ರೆಸ್‌) ಹೋರಾಟ, ಸೇವೆ ಮತ್ತು ತ್ಯಾಗವನ್ನು ಸ್ವಜನಪಕ್ಷಪಾತ ಎಂದು ಕರೆಯುವವರು ಇಂದು ಅಧಿಕಾರವನ್ನು ತಮ್ಮ ಸರ್ಕಾರಿ ಕುಟುಂಬಕ್ಕೆ ಹಂಚುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

‘ಮಾತು ಮತ್ತು ಕಾರ್ಯದಲ್ಲಿನ ಈ ವ್ಯತ್ಯಾಸವನ್ನೇ ನರೇಂದ್ರ ಮೋದಿ ಎಂದು ಕರೆಯಲಾಗುತ್ತದೆ’ ಎಂದು ರಾಹುಲ್‌ ಹೇಳಿದ್ದಾರೆ.
ಪ್ರಧಾನಿ ಮೋದಿ 3.0 ಸರ್ಕಾರದಲ್ಲಿ ರಾಜಕೀಯ ಕುಟುಂಬ ಹಿನ್ನೆಲೆ ಹೊಂದಿರುವ ಕೆಲವು ಸಚಿವರ ಹೆಸರುಗಳ ಪಟ್ಟಿಯನ್ನು ರಾಹುಲ್‌ ಗಾಂಧಿ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಎಚ್‌. ಡಿ ಕುಮಾರಸ್ವಾಮಿ – ಎಚ್‌.ಡಿ ದೇವೇಗೌಡ ಅವರ ಪುತ್ರ

ಜ್ಯೋತಿರಾಧಿತ್ಯ ಸಿಂಧಿಯಾ – ಮಾಜಿ ಕೇಂದ್ರ ಸಚಿವ ಮಾಧವ್‌ ರಾವ್‌ ಸಿಂಧಿಯಾ ಅವರ ಪುತ್ರ

ಕಿರಣ್‌ ರಿಜಿಜು – ಅರುಣಾಚಲ ಪ್ರದೇಶದ ಮೊದಲ ಹಂಗಾಮಿ ಸ್ಪೀಕರ್‌ ರಿಂಚಿನ್‌ ಖರು ಅವರ ಪುತ್ರ

ರಕ್ಷಾ ಖಡಸೆ – ಮಹಾರಾಷ್ಟ್ರ ಮಾಜಿ ಸಚಿವ ಏಕನಾಥ ಖಡಸೆ ಅವರ ಸೊಸೆ

ಜಯಂತ್‌ ಚೌಧರಿ – ಮಾಜಿ ಪ್ರಧಾನಿ ಚೌಧರಿ ಚರಣ್‌ ಸಿಂಗ್‌ ಅವರ ಮೊಮ್ಮಗ

ಚಿರಾಗ್‌ ಪಾಸ್ವಾನ್‌ – ಮಾಜಿ ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಅವರ ಪುತ್ರ

ಜೆ. ಪಿ ನಡ್ಡಾ – ಮಧ್ಯಪ್ರದೇಶದ ಮಾಜಿ ಸಂಸದ ಮತ್ತು ಸಚಿವ ಜಯ್‌ಶ್ರೀ ಬ್ಯಾನರ್ಜಿ ಅವರ ಅಳಿಯ

ರಾಮ್‌ನಾಥ್‌ ಠಾಕೂರ್ – ಬಿಹಾರ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್‌

ರಾಮ್‌ಮೋಹನ್‌ ನಾಯ್ಡು – ಮಾಜಿ ಕೇಂದ್ರ ಸಚಿವ ಯರ್ರನ್ ನಾಯ್ಡು ಅವರ ಪುತ್ರ

ಜಿತಿನ್‌ ಪ್ರಸಾದ್‌ – ಮಾಜಿ ಸಂಸದ ಜಿತೇಂದ್ರ ಪ್ರಸಾದ್‌ ಅವರ ಪುತ್ರ

ಪೀಯೂಷ್‌ ಗೋಯಲ್‌ – ಮಾಜಿ ಕೇಂದ್ರ ಸಚಿವ ವೇದ ಪ್ರಕಾಶ್‌ ಗೋಯಲ್‌ ಅವರ ಪುತ್ರ

ಇದು ಪ್ರಧಾನಿ ಮೋದಿ ಅವರ ಎನ್‌ಡಿಎ ಮೈತ್ರಿಕೂಟದ ‘ಪರಿವಾರ ಮಂಡಲ’ ಎಂದು ರಾಹುಲ್‌ ಹೇಳಿದ್ದಾರೆ.

https://x.com/RahulGandhi/status/1800474965441229220?ref_src=twsrc%5Etfw%7Ctwcamp%5Etweetembed%7Ctwterm%5E1800474965441229220%7Ctwgr%5E9614827d5c9d602d1cbf6aa75f3c0c7e6662b965%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fvijayvani-epaper-vijaykan%3Fmode%3Dpwaaction%3Dclick

ಕಾಂಗ್ರೆಸ್‌ ಕುಟುಂಬ ರಾಜಕೀಯ ನಡೆಸುತ್ತಿದೆ ಎಂದು ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ರಾಹುಲ್‌ ಗಾಂಧಿ ಅವರು ಈ ಪೋಸ್ಟ್‌ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!