ಜೂನ್‌ 4 ಮಧ್ಯಾಹ್ನ 12:30ರ ವೇಳೆಗೆ 400 ಸ್ಥಾನಗಳ ಗಡಿಯಲ್ಲಿ NDA: ಅಮಿತ್‌ ಶಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಲೋಕಸಭಾ ಚುನಾವಣೆಯ ಮತ ಎಣಿಕೆಯ ದಿನವಾದ ಜೂನ್‌ 4 ರಂದು ಮಧ್ಯಾಹ್ನ 12:30ರ ವೇಳೆಗೆ ಎನ್‌ಡಿಎ (NDA) ಒಕ್ಕೂಟ 400 ಸ್ಥಾನಗಳ ಗಡಿಯನ್ನು ದಾಟಿರುತ್ತದೆ ಎಂದು ಗೃಹ ಸಚಿವ ಅಮಿತ್‌ ಶಾ (Amit Shah)ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ನಾಯಕತ್ವದಲ್ಲಿ ಬಿಜೆಪಿಯು 2019ರ ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿ ಉತ್ತಮ ಸಾಧನೆ ಮಾಡಿದೆಯೋ ಅದೇ ರೀತಿಯ ಫಲಿತಾಂಶ ಮಹಾರಾಷ್ಟ್ರ, ದೆಹಲಿ, ಕರ್ನಾಟಕ, ಮಧ್ಯಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಮತ್ತು ಗುಜರಾತ್‌ನಲ್ಲಿ ಪುನರಾವರ್ತನೆಯಾಗಲಿದೆ ಎಂದರು.

ಬಂಗಾಳದಲ್ಲಿ ಕನಿಷ್ಟ 30 ಸ್ಥಾನಗಳನ್ನು ಈ ಬಾರಿ ಬಿಜೆಪಿ (BJP) ಗೆಲ್ಲಲಿದೆ. ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಭಾರೀ ಸ್ಪರ್ಧೆ ಇರುವುದನ್ನು ಅಮಿತ್‌ ಶಾ ಒಪ್ಪಿಕೊಂಡಿದ್ದಾರೆ. ಈ ಬಾರಿ ಕೇರಳ ಮತ್ತು ತಮಿಳುನಾಡಿನಲ್ಲಿ ನಾವು ಖಾತೆ ತೆರೆಯಲಿದ್ದೇವೆ. ದಕ್ಷಿಣದ ನಾಲ್ಕು ರಾಜ್ಯಗಳಲ್ಲಿ ನಾವು ಕಾಂಗ್ರೆಸ್‌ಗಿಂತ ಮುಂದಿದ್ದೇವೆ ಎಂದು ತಿಳಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!