ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಖದಿಂದ ಜರ್ಜರಿತವಾದ ಗ್ರೀಕ್‌ನಲ್ಲಿ ಅಲ್ಲಿನ ಅಧಿಕಾರಿಗಳು ಸುಮಾರು 2,500 ಜನರನ್ನು ಸೋಮವಾರ ಸಂಜೆ ಸ್ಥಳಾಂತರಿಸಲಾಗಿದೆ. ಈ ನಡುವೆ ಬೃಹತ್ ಕಾಡ್ಗಿಚ್ಚಿನಿಂದಾಗಿ ಹತ್ತಾರು ಜನರು ಈಗಾಗಲೇ ಗ್ರೀಕ್ ದ್ವೀಪದ ರೋಡ್ಸ್‌ನಿಂದ ಪಲಾಯನ ಮಾಡಿದ್ದಾರೆ.
ಮಧ್ಯ ಮತ್ತು ದಕ್ಷಿಣ ಗ್ರೀಕ್ ಪ್ರದೇಶಗಳಲ್ಲಿ ಕಾಡ್ಗಿಚ್ಚು ಹೊತ್ತಿ ಉರಿಯುತ್ತಿರುವುದಾಗಿ ಸಿಎನ್‌ಎನ್ ವರದಿ ಮಾಡಿದೆ. ಗ್ರೀಕ್‌ನಲ್ಲಿ ಸಂಭವಿಸಿದ ಹಲವಾರು ಬೆಂಕಿ ದುರಂತಗಳಲ್ಲಿ ಇದು ದೊಡ್ಡದಾಗಿದೆ. ಇದು ಶಾಖದ ಅಲೆಯ ಪರಿಣಾಮವಾಗಿ ಹೊತ್ತಿ ಉರಿಯುತ್ತಿದೆ.
ಇದಕ್ಕೂ ಮುನ್ನ 16,000 ಸ್ಥಳೀಯರು, ಪ್ರವಾಸಿಗರನ್ನು ವಾಹನಗಳ ಮೂಲಕ ಮತ್ತು 3,000ಜನರನ್ನು ಸಮುದ್ರದ ಮೂಲಕ ಸಾಗಿಸಲಾಯಿತು.