ಹೊಸದಿಗಂತ ವರದಿ,ಯಾದಗಿರಿ:
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಸಾವನ್ನಪ್ಪಿರುವುದು ಬಹಳ ನೋವಿನ ಸಂಗತಿ, ಪ್ರತಿಯೊಂದು ಜೀವವೂ ಅತ್ಯಮೂಲ್ಯವಾದದ್ದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಜೀವಕ್ಕೆ ಬೆಲೆ ಕಟ್ಟೋಕೆ ಆಗುವುದಿಲ್ಲ, ನನಗೆ ಬಹಳ ನೋವಾಗಿದೆ, ನನ್ನ ಗಮನಕ್ಕೆ ಬಂದಿದೆ. ಇವತ್ತು ಬೆಳಿಗ್ಗೆ ಜೂಮ್ ಮೀಟಿಂಗ್ ಮಾಡಿದ್ದೇನೆ. ಎಲ್ಲ ಹಿರಿಯ ಅಧಿಕಾರಿಗಳ ಜೊತೆ ಸಭೆನು ಮಾಡಿದ್ದೇನೆ, ಚರ್ಚಿಸಿರುವೆ ಎಂದರು.
ಮಾನವ-ಪ್ರಾಣಿ ಸಂಘರ್ಷ ತಡೆಯುವುದಕ್ಕೆ ಬಹಳಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದೇವೆ.ಎಲ್ಲ ಕಡೆ ಪ್ರಚಾರ, ಅರಿವು ಮೂಡಿಸಲಿದ್ದೇವೆ.ರೈಲ್ವೆ ಬ್ಯಾರಿಕೇಡ್, ಕಂದಕ, ಟೆಂಡೆಕಲ್ ಪಿನಿಶಿಂಗ್ ಮಾಡ್ತಿದ್ದೇವೆ ಎಂದು ಹೇಳಿದರು.
ಆನೆಗಳು ಹೊರಗಡೆ ಬರದಂತೆ ಅದಕ್ಕೆ ಬೇಕಾಗುವ ಆಹಾರ, ನೀರಿನ ವ್ಯವಸ್ಥೆ ಮಾಡುತ್ತಿದ್ದೇವೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ವಯ ರಕ್ಷಣೆ ಕೊಡ್ತಿದ್ದೇವೆ. ಆನೆಗಳ ಸಂಖ್ಯೆ ಜಾಸ್ತಿ ಆಗಿದೆ, ಆದರೆ ಪ್ರದೇಶ ಜಾಸ್ತಿ ಆಗಿಲ್ಲ. ಆನೆಗಳ ಕಾರಿಡಾರ್ ಗೆ ಸ್ವಲ್ಪ ಎಫೆಕ್ಟ್ ಆಗಿದೆ. ಇವೆಲ್ಲಾ ಕಾರಣಗಳಿಂದ ಇವತ್ತು ಮಾನವ-ಪ್ರಾಣಿ ಸಂಘರ್ಷ ಜಾಸ್ತಿ ಆಗುತ್ತಿದೆ ಎಂದರು.
ಆಧುನಿಕ ತಂತ್ರಜ್ಞಾನ ಬಳಸಿಕೊಂಡು ರೆಡಿಯೋ ಕಾಲರ್ ಹಾಕಿ ಆನೆಗಳ ಚಲನವಲನ ಬಗ್ಗೆ ಗಮನವಿಟ್ಟು ಎಲಿಫೆಂಟ್ ಟಾಸ್ಕ್ ಪೋರ್ಸ್ ಮಾಡಿದ್ದೇವೆ. ಆ್ಯಂಟಿ ಪೌಚಿಂಗ್ ಕ್ಯಾಂಪ್, ಆ್ಯಂಟಿ ಡಿಪಟೇಶನ್ ಕ್ಯಾಂಪ್, ರ್ಯಾಪಿಡ್ ರೆಸ್ಪಾನ್ಸ್ ಟೀಮ್ ಇದೆ.
ಎಲ್ಲರೂ ಫ್ರಂಟ್ ಲೈನ್ ಸ್ಟಾಪ್ ಇದ್ದಾರೆ. ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಕಾಡಾನೆ ದಾಳಿ ತಡೆಯೋದಕ್ಕೆ ಪ್ರಯತ್ನ ಮಾಡುತ್ತೇವೆ ಎಂದರು.