ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಲೇ ಇದ್ದು, ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ. ಈ ನಡುವೆ ವೀಕೆಂಡ್‌ನಲ್ಲಿ ಯಾವುದಾದರೂ ಕೆರೆ ನೋಡಬೇಕು ಅಂದ್ರೆ ಬ್ಯಾಟರಾಯನಪುರ ಕಡೆ ಬನ್ನಿ!
ಭಾರೀ ಮಳೆಗೆ ಬ್ಯಾಟರಾಯನಪುರ ವ್ಯಾಪ್ತಿಯ ಟಾಟಾ ನಗರ ಸಂಪೂರ್ಣ ಮುಳುಗಡೆಯಾಗಿದೆ. ಬೆಂಗಳೂರಿನಲ್ಲಿ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಇಡೀ ಏರಿಯಾನೇ ಜಲಾವೃತಗೊಂಡಿದೆ. 300ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಕಾರು, ಬೈಕ್ ಎಲ್ಲವೂ ಸಂಪೂರ್ಣ ಮುಳುಗಿ ಹೋಗಿದೆ. ಟಾಟಾ ನಗರದಲ್ಲಿರುವ ಸಬ್ ರಿಜಿಸ್ಟರ್ ಕಛೇರಿ ನೆರೆಯಿಂದ ಆವೃತವಾಗಿದೆ.
ಗ್ರೌಂಡ್ ಫ್ಲೋರ್‌ನಲ್ಲಿರುವ ಎಲ್ಲಾ ಮನೆಗಳು ಸಂಪೂರ್ಣ ಜಲಾವೃತಗೊಂಡಿದೆ. ಅಗ್ನಿಶಾಮಕ ದಳದಿಂದ ಬೋಟ್ ಮೂಲಕ ಕಾರ್ಯಚರಣೆ ನಡೆಯುತ್ತಿದ್ದು, ಟಾಟಾ ನಗರದ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕೆಲಸದಲ್ಲಿ ತೊಡಗಿದ್ದಾರೆ. ಇನ್ನು ಹೊರಗಿನ ಯಾರಿಗೂ ಈ ಏರಿಯಾ ಸುತ್ತಮುತ್ತ ಬಾರದಂತೆ ಮನವಿ ಮಾಡಲಾಗಿದೆ. ಇರುವ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದ್ದು, ಎಲ್ಲರೂ ಸುರಕ್ಷಿತವಾಗಿರುವಂತೆ ಹೇಳಲಾಗಿದೆ.