ಮೆದುಳು ಶಾರ್ಪ್ ಆಗ್ಬೇಕಾ? ಮಕ್ಕಳಿಗೆ ಈ ಆಹಾರಗಳನ್ನು ಮಿಸ್ ಮಾಡದೇ ತಿನ್ನಿಸಿ. ಯಾವೆಲ್ಲ ಪದಾರ್ಥಗಳು? ಇಲ್ಲಿದೆ ಡೀಟೇಲ್ಸ್..
ಬಾದಾಮಿಯನ್ನು ರಾತ್ರಿಯಿಡಿ ನೆನೆಸಿ ಬೆಳಗ್ಗೆ ಸೇವಿಸುವುದರಿಂದ ನೆನಪಿನ ಶಕ್ತಿ ವೃದ್ಧಿಗೆ ಉತ್ತಮ ಮಾರ್ಗವಾಗಿದೆ. ವಿಟಮಿನ್ ಇ, ಒಮೆಗಾ-3 ಕೊಬ್ಬಿನಾಮ್ಲಗಳು ಹಾಗೂ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವುದರಿಂದ ಇವು ಮೆದುಳಿನ ಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತವೆ.
ಮೆದುಳಿಗೆ ಹೋಲುವ ಕಾರಣದಿಂದಾಗಿ ಮೆದುಳಿನ ಆಹಾರ ಎಂದು ವಾಲ್ನಟ್ಸ್ಗಳನ್ನು ಕರೆಯಲಾಗುತ್ತದೆ. ಮೆದುಳಿನ ಕಾರ್ಯಕ್ಕೆ ಅತ್ಯಗತ್ಯವಾದ ಒಮೆಗಾ-3 ಕೊಬ್ಬಿನಾಮ್ಲದ ಒಂದು ರೂಪವಾದ ಡಿಹೆಚ್ಎ ಯಿಂದ ತುಂಬಿರುತ್ತದೆ. ನಿತ್ಯ ಸೇವನೆಯ ಮೆದುಳಿನ ನೆನಪಿನ ಶಕ್ತಿ ಹೆಚ್ಚಿಸುತ್ತದೆ.
ಅರಿಶಿನದ ಕರ್ಕ್ಯುಮಿನ್ ಪ್ರಬಲವಾದ ಉರಿಯೂತ ನಿವಾರಕವಾಗಿದೆ. ಇದು ಸ್ಮರಣಶಕ್ತಿ ಹೆಚ್ಚಿಸುತ್ತದೆ, ನರ ಕ್ಷೀಣಗೊಳ್ಳುವ ಅಸ್ವಸ್ಥತೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಸಿರೊಟೋನಿನ್ ಮತ್ತು ಡೋಪಮೈನ್ ಅನ್ನು ಹೆಚ್ಚಿಸುವ ಮೂಲಕ ಮನಸ್ಥಿತಿ ಸುಧಾರಿಸುತ್ತದೆ.
ಭಾರತೀಯ ದೇಸಿ ತುಪ್ಪ ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಮೂಲಕ ಪೌಷ್ಟಿಕ ಕೊಬ್ಬುಗಳನ್ನು ದೇಹಕ್ಕೆ ನೀಡುತ್ತದೆ. ದಾಲ್ ಹಾಗು ರೊಟ್ಟಿಯಲ್ಲಿ ಒಂದು ಟೀ ಚಮಚ ಶುದ್ಧ ತುಪ್ಪವನ್ನು ಸೇವಿಸುವುದರಿಂದ ದೇಹ ಮತ್ತು ಮೆದುಳು ಎರಡನ್ನೂ ಪೋಷಿಸುತ್ತದೆ.
ವಿಟಮಿನ್ ಸಿ ಸಮೃದ್ಧವಾಗಿರುವ ಆಮ್ಲಾ ರಕ್ತದ ಹರಿವನ್ನು ಹೆಚ್ಚಿಸಿ ಮೆದುಳಿನ ಚಟುವಟಿಕೆ ಹಾಗು ಬುದ್ಧಿ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
HEALTH | ಮೆದುಳು ಶಾರ್ಪ್ ಆಗ್ಬೇಕಾ? ಈ ಆಹಾರ ಮಿಸ್ ಮಾಡದೇ ತಿನ್ನಿ
