ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೇನು ಕೆಲವೇ ದಿನಗಳಲ್ಲಿ ನಡೆಯುವ ಪ್ಯಾರಿಸ್ ಒಲಿಂಪಿಕ್ಸ್ಗಾಗಿ ಭಾರತದ ಚಾಂಪಿಯನ್ಸ್ ತಯಾರಿ ನಡೆಸಿದ್ದಾರೆ. ಇವರ ಜತೆ ಪ್ರಧಾನಿ ಮೋದಿ ಸಂವಾದ ನಡೆಸಿದ್ದಾರೆ.
ಈ ವೇಳೆ ಪ್ರಧಾನಿ ಮೋದಿ ಜಾವೆಲಿನ್ ಆಟಗಾರ ನೀರಜ್ ಚೋಪ್ರಾಗೆ ಕಳೆದ ಬಾರಿ ನಿಮ್ಮ ಮನೆಯ ಸಿಹಿತಿಂಡಿ ಚುರ್ಮಾ ತಂದು ಕೊಡುತ್ತೇನೆ ಎಂದಿದ್ದೆ, ಈಗಲೂ ಅದು ನನ್ನ ಕೈ ಸೇರಿಲ್ಲ ಎಂದು ನೆನಪು ಮಾಡಿದ್ದಾರೆ. ಅದಕ್ಕೆ ನೀರಜ್ ಚೋಪ್ರಾ ಈ ಬಾರಿ ಸ್ವೀಟ್ ಜೊತೆಗೆ ಗೋಲ್ಡ್ ಕೂಡ ತರುತ್ತೇನೆ ಎಂದು ಹೇಳಿದ್ದಾರೆ.
ಚುರ್ಮಾ ಎಂದರೆ ಅದು ಹರಿಯಾಣದ ಜನಪ್ರಿಯ ಸಿಹಿತಿಂಡಿಯಾಗಿದೆ.