ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ತಮ್ಮ ಸ್ಫೂರ್ತಿದಾಯಕ ಪ್ರದರ್ಶನ ನೀಡುವ ಮೂಲಕ ಪ್ಯಾರಿಸ್ ಡೈಮಂಡ್ ಲೀಗ್ನಲ್ಲಿ ಪ್ರಶಸ್ತಿಗೆ ಮುಡಿಗೇರಿಸಿಕೊಂಡಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಅವರು 88.16 ಮೀಟರ್ ದೂರ ಜಾವೆಲಿನ್ ಎಸೆದು ಪ್ರಬಲ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದರು.
ನೀರಜ್ ಚೋಪ್ರಾ 2023ರ ಜೂನ್ನಲ್ಲಿ ಲಾಸನ್ನೆಯಲ್ಲಿ ನಡೆದ ಡೈಮಂಡ್ ಲೀಗ್ನಲ್ಲಿ ಕೊನೆಯ ಬಾರಿಗೆ ಡೈಮಂಡ್ ಲೀಗ್ ಪ್ರಶಸ್ತಿ ಜಯಿಸಿದ್ದರು. ಇದೀಗ ಬರೋಬ್ಬರಿ ಎರಡು ವರ್ಷಗಳ ಬಳಿಕ ನೀರಜ್ ಡೈಮಂಡ್ ಲೀಗ್ ಪ್ರಶಸ್ತಿ ಜಯಿಸಿದ್ದಾರೆ.
ಜರ್ಮನಿಯ ಜೂಲಿಯನ್ ವೇಬರ್ 87.88 ಮೀಟರ್ ಎಸೆದು ಎರಡನೇ ಸ್ಥಾನ ಪಡೆದರೆ, ಬ್ರೆಜಿಲ್ನ ಲ್ಯೂಜ್ ಮೌರಿಕೋ ಡಿ ಸಿಲ್ವಾ 86.62 ಮೀಟರ್ ಎಸೆದು ಮೂರನೇ ಸ್ಥಾನದಲ್ಲಿ ತೃಪ್ತಿಪಟ್ಟರು.
ಇತ್ತೀಚಿಗೆ ದೋಹಾದಲ್ಲಿ ನಡೆದ ಇನ್ನೊಂದು ಸ್ಪರ್ಧೆಯಲ್ಲಿ 90.23 ಮೀಟರ್ ಎಸೆದು ಉತ್ತಮ ಸಾಧನೆ ಮಾಡಿದರೂ, ಜರ್ಮನ್ ಸ್ಪರ್ಧಿಯಿಂದ ಹಿಂದಿಕ್ಕಲ್ಪಟ್ಟಿದ್ದರು. ಆದರೆ ಈ ಬಾರಿ ಅವರು ಸ್ಪರ್ಧೆಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಗೆಲುವಿನ ನಗೆ ಬೀರಿದ್ದಾರೆ.