ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ಸಿಲ್ಕ್ ಸೀರೆಯ ಕ್ರೇಝ್ ಬಗ್ಗೆ ಎಷ್ಟೋ ಮಂದಿಗೆ ಗೊತ್ತೇ ಇಲ್ಲ! ಒಂದೇ ಒಂದು ಮೈಸೂರು ಸಿಲ್ಕ್ ಸೀರೆ ಖರೀದಿ ಮಾಡೋಕೆ ತಿಂಗಳಾನುಗಟ್ಟಲೆ ಹಣ ಕೂಡಿಡಬೇಕಾಗುತ್ತದೆ. ಹಣ ಹೊಂದಿಸಿ ಖರೀದಿಗೆ ಬಂದ್ರೂ ಅಂದುಕೊಂಡ ಕಲರ್, ಡಿಸೈನ್ ಏನೂ ಸಿಗೋದಿಲ್ಲ. ಈ ಸಿಲ್ಕ್ ಸೀರೆ ಬಗ್ಗೆ ಸುದ್ದಿಯೊಂದು ವೈರಲ್ ಆಗಿದೆ ನೋಡಿ..
ಶುದ್ಧ ರೇಷ್ಮೆ ಸೀರೆಯನ್ನು ಖರೀದಿಸಲು ನಸುಕಿನ ಜಾವ 4 ಗಂಟೆಗೆ ಬಂದು ಸರದಿ ಸಾಲಿನಲ್ಲಿ ಮಹಿಳೆಯರು ನಿಂತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫಸ್ಟ್ ಬಂದವರಿಗೆ ಮೊದಲು ಸೀರೆ ಖರೀದಿಸುರವ ಅವಕಾಶ ಸಿಗುವ ಕಾರಣ ತಮಗಿಷ್ಟದ ಸೀರೆಗಾಗಿ ಜನ ಗಂಟೆಗಟ್ಟಲೆ ಕಾಯುತ್ತಾರೆ.
ಕರ್ನಾಟಕ ಸೋವಿಯತ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಶೋ ರೂಂ ಹೊರಗೆ ನಸುಕಿನ ಜಾವವೇ ಮಹಿಳೆಯರು ಸಾಲುಗಟ್ಟಿ ನಿಂತಿದ್ದಾರೆ. 23,000 ರಿಂದ ಎರಡೂವರೆ ಲಕ್ಷದವರೆಗಿನ ರೇಷ್ಮೆ ಸೀರೆಗಳನ್ನು ಖರೀದಿಸಿದ್ದಾರೆ. ಪ್ರತಿ ಗ್ರಾಹಕರಿಗೆ ಕೇವಲ 1 ಸೀರೆ ಮಾತ್ರ ಖರೀದಿಸಲು ಅವಕಾಶ ನೀಡಲಾಗಿತ್ತು, ಟೋಕನ್ ಪಡೆದು ಮಹಿಳೆಯರು ಸಾಲಿನಲ್ಲಿ ನಿಂತಿದ್ದರು.
ಅಧಿಕೃತ ಮೈಸೂರು ರೇಷ್ಮೆ ಸೀರೆಗಳ ಕೊರತೆ ಇದೆ, ವಿಶೇಷವಾಗಿ ಶುದ್ಧ ಮೈಸೂರು ರೇಷ್ಮೆ ಸೀರೆಗಳ ಅಧಿಕೃತ ಉತ್ಪಾದನೆ ಮತ್ತು ಜಿಐ-ಟ್ಯಾಗ್ ಮಾಡಿದ ಹಕ್ಕುಗಳನ್ನು ಹೊಂದಿರುವ ಕರ್ನಾಟಕ ರೇಷ್ಮೆ ಉದ್ಯಮ ನಿಗಮವು ಉತ್ಪಾದಿಸುವುದು.


