ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಬಿಹಾರದಲ್ಲಿ ಇಬ್ಬರನ್ನು ಬಂಧಿಸಿದ ಸಿಬಿಐ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಪಾಟ್ನಾದಿಂದ ಮತ್ತಿಬ್ಬರನ್ನು ಬಂಧಿಸಿದ್ದಾರೆ.

ನೀಟ್ ಅಭ್ಯರ್ಥಿಯಾಗಿರುವ ಸನ್ನಿ ಕುಮಾರ್ ಎಂಬಾತನನ್ನು ನಳಂದಾದಿಂದ ಬಂಧಿಸಲಾಗಿದ್ದು, ಮತ್ತೊಬ್ಬ ಅಭ್ಯರ್ಥಿಯ ತಂದೆ ರಂಜಿತ್ ಕುಮಾರ್ ಅವರನ್ನು ಗಯಾದಿಂದ ಬಂಧಿಸಲಾಗಿದೆ.
ಮೇ 5 ರಂದು ನಡೆದ NEET-UG 2024 ಪರೀಕ್ಷೆಯಲ್ಲಿ ಸರಿಸುಮಾರು 24 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು.

ನೀಟ್-ಯುಜಿ ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಸಿಬಿಐ ಇದುವರೆಗೆ ಎಂಟು ಜನರನ್ನು ಮತ್ತು ಲಾತೂರ್ ಮತ್ತು ಗೋಧ್ರಾದಲ್ಲಿ ಆಪಾದಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಲಾ ಒಬ್ಬರನ್ನು ಮತ್ತು ಪಿತೂರಿ ನಡೆಸಿದ್ದಕ್ಕಾಗಿ ಡೆಹ್ರಾಡೂನ್‌ನಿಂದ ಇನ್ನೊಬ್ಬರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!