ನೆಹರೂ ಹೆಸರಿನಿಂದ ಅಲ್ಲ, ಕೆಲಸದಿಂದ ಪರಿಚಿತ: ಮ್ಯೂಸಿಯಂ ಮರುನಾಮಕರಣಕ್ಕೆ ರಾಹುಲ್ ಗಾಂಧಿ ಕಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೇಂದ್ರ ಸರಕಾರದಿಂದ ನೆಹರೂ ಮ್ಯೂಸಿಯಂ ಅನ್ನು ಪ್ರಧಾನಿ ಮ್ಯೂಸಿಯಂ ಎಂದು ಮರುನಾಮಕರಣ ಮಾಡಲಾಗಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನೆಹರೂ ಅವರು ಕೇವಲ ಅವರ ಹೆಸರಿನಿಂದ ಅಲ್ಲ, ಅವರ ಕೆಲಸದಿಂದ ಪರಿಚಿತರಾಗಿದ್ದಾರೆ ಎಂದು ಹೇಳಿದರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಜವಾಹರಲಾಲ್ ನೆಹರೂ ಅವರ ದೈತ್ಯ ಕೊಡುಗೆಗಳನ್ನು ಎಂದಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದರು.

ಆಗಸ್ಟ್ 14ರಂದು ತೀನ್ಮೂರ್ತಿಯಲ್ಲಿರುವ ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ ಹೆಸರನ್ನು ಅಧಿಕೃತವಾಗಿ ಪ್ರಧಾನ ಮಂತ್ರಿ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ ಎಂದು ಬದಲಾಯಿಸಲಾಯಿತು. ಕಾಂಗ್ರೆಸ್ ಟೀಕೆ ನಡುವೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಜೆಪಿ, ವಸ್ತುಸಂಗ್ರಹಾಲಯವು ನೆಹರೂ ಅವರ ಮೇಲೆ ಕೇಂದ್ರೀಕರಿಸಿಲ್ಲ. ಇದುವರೆಗಿನ ಎಲ್ಲಾ ಪ್ರಧಾನಿಗಳ ಇತಿಹಾಸವನ್ನು ಕೇಂದ್ರೀಕರಿಸಿದೆ. ಆದರೆ ಇದಕ್ಕೂ ಮೊದಲು ಬೇರೆ ಯಾವುದೇ ಪ್ರಧಾನಿಗಳಿಗೆ ಸ್ಥಾನವಿಲ್ಲ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!