ಹೊಸದಿಗಂತ ಡಿಜಿಟಲ್ ಡೆಸ್ಕ್
ಗ್ರಹಚಾರ ಕೆಟ್ಟರೆ ಹಗ್ಗವೂ ಹಾವಾಗಿ ಸುತ್ತಿಕೊಳ್ಳುತ್ತದೆ ಎಂಬ ಮಾತಿದೆ. ಮಧ್ಯಪ್ರದೇಶದ
ವ್ಯಕ್ತಿಯೊಬ್ಬನ ವಿಚಾರದಲ್ಲಿ ಈ ಮಾತು ಅಕ್ಷರಶಃ ನಿಜವಾಗಿದೆ. ಪಕ್ಕದ ಮನೆಯ ಗಂಡ- ಹೆಂಡತಿ ನಡುವಿನ ಜಗಳದಲ್ಲಿ ಮಧ್ಯಪ್ರವೇಶಿಸಿದ ನೆರೆಯವನು ಹೆಣವಾಗಿದ್ದಾನೆ.
ಪಪ್ಪು ಏರ್‌ವಾರ್ ಎಂಬಾತನ ಮನೆಯಲ್ಲಿ ಕುರಿಮಾಸಂವನ್ನು ಹೇಗೆ ಅಡಿಗೆ ಮಾಡುವುದು ಎಂಬ ವಿಚಾರವಾಗಿ ಪಪ್ಪು ಮತ್ತು ಅವನ ಹೆಂಡತಿಯ ನಡುವೆ ಏರಿದ ಧ್ವನಿಯಲ್ಲಿ ವಾಗ್ವಾದ ನಡೆಯುತ್ತಿತು. ಈ ಜಗಳವನ್ನು ನೋಡಿ ಪಾಪ ಏನೋ ಸಿಟ್ಟಿನಲ್ಲಿ ಜಗಳವಾಡುತ್ತಿದ್ದಾರೆ ಬಿಡಿಸಿ ಬರೋಣವೆಂದು ನೆರೆಮನೆಯ ನಿವಾಸಿಯಾದ ಬಿಲ್ಲು ಎಂಬಾತ ಅವರ ಮನೆಗೆ ಹೋಗಿದ್ದಾನೆ.
ಈ ವೇಳೆ ಜಗಳ ಬಿಡಿಸಲು ಬಂದ ಬಿಲ್ಲು ಮೇಲೆ ಕೋಪಗೊಂಡ ಪಪ್ಪು ಆತನನ್ನು ಹೊಡೆದು ಕೊಂದಿದ್ದಾನೆ.
ಬಿಲ್ಲು ಸಾವಿನ ನಂತರ, ಪತ್ನಿ ನೀಡಿದ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಪಪ್ಪು ವಿರುದ್ಧ ದೂರು ದಾಖಲಿಸಿದ್ದು, ಪಪ್ಪುವನ್ನು ಬಂಧಿಸಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ