ಜನರ ಭಾವನೆಗಳಲ್ಲಿ ಆಟವಾಡುತ್ತಿರುವ ನೆಲ್ಯಾಡಿ ಗ್ರಾಮ ಪಂಚಾಯತ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪುತ್ತೂರಿನ ನೆಲ್ಯಾಡಿ ಗ್ರಾಮ ಪಂಚಾಯತ್‌ನಿಂದ ಆಧಾರ್ ಕಾರ್ಡ್ ತಿದ್ದುಪಡಿ ಮಾಡಲು ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ, ಆಧಾರ್ ತಿದ್ದುಪಡಿಗೆ ಟೋಕನ್ ಸಿಸ್ಟಮ್ ಇದ್ದರೂ ಅದನ್ನು ಆ.24ರ 9 ಗಂಟೆಗೆ, ಆ.25ರ ಬೆಳಗ್ಗೆ 8:30ಕ್ಕೆ, ಆ.26 ರಂದು ಟೋಕನ್ ಕೊಡಲಾಯಿತು. ಆನಂತರ ಬಂದು ಕಾದು ಕುಳಿತವರಿಗೆ ಪಂಚಾಯತ್‌ನವರು ಟೋಕನ್ ಇಲ್ಲ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.

ಇದು ಗ್ರಾಮ ಪಂಚಾಯತ್‌ನ ಸದಸ್ಯರು ಅವರಿಗೆ ಬೇಕಾದವರನ್ನು ಕರೆಸಿ ಬಂದವರಿಗೆ ಟೋಕನ್ ಕೊಟ್ಟು ಇತರರನ್ನು ಮೂರ್ಖರನ್ನಾಗಿ ಮಾಡುವಂತಹ ವ್ಯವಸ್ಥೆಯಾಗಿದೆ ಎಂದು ಊರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯತ್ ಎಂದರೆ ಕೇವಲ ಸದಸ್ಯರಿಗಾಗಿ ಮತ್ತು ಅವರ ಅನುಯಾಯಿಗಳಿಗಾಗಿ ಮಾತ್ರ ಇರುವಂತಹದ್ದೇ ಅಥವಾ ಗ್ರಾಮಕ್ಕೆ ಸಂಬಂಧಪಟ್ಟದ್ದೇ ಎಂದು ಪ್ರಶ್ನಿಸುವಂತಾಗಿದೆ. ಗ್ರಾಮ ಪಂಚಾಯತ್ ಗ್ರಾಮಕ್ಕೆ ಸಂಬಂಧಪಟ್ಟದ್ದಾದರೂ ನೋಟಿಸ್ ಬೋರ್ಡಿನಲ್ಲಿ ಟೋಕನ್ ಕೊಡುವ ಸಮಯವನ್ನು ಹಾಕಿ ಅದೇ ಪ್ರಕಾರ ಟೋಕನ್ ಕೊಡಬೇಕಾಗಿತ್ತು, ಅದರ ಬದಲು ಒಂದು ದಿನ 9 ಗಂಟೆಗೆ, ಒಂದು ದಿನ 8ವರೆ ಗಂಟೆಗೆ, ಕೊನೆಯ ದಿನ 6 ಗಂಟೆಗೆ 7 ಜನರಿಗೆ, 7 ಗಂಟೆಗೆ 10 ಜನರಿಗೆಕೊಡುತ್ತಾರೆ. ಹಾಗಾದರೆ ಇದರ ಅರ್ಥ ಏನು? ಇದು ನೆಲ್ಯಾಡಿ ಗ್ರಾಮ ಪಂಚಾಯತ್ ವ್ಯವಸ್ಥೆಯೇ? ಇದು ಒಂದು ಸರಕಾರಿ ಕಚೇರಿ ಎಂದಾದರೆ ಅದಕ್ಕೆ ಸಂಬಂಧಪಟ್ಟಂತಹ ವ್ಯವಸ್ಥೆಗಳು ಇರುತ್ತವೆ. ಆ ವ್ಯವಸ್ಥೆಯನ್ನ ಪಾಲನೆ ಮಾಡುವುದರಿಂದ ಯಾವುದೇ ಒಬ್ಬ ನಾಗರಿಕನಿಗೆ ಸಮಸ್ಯೆಯಾಗುವುದಿಲ್ಲ. ಅದರ ಬದಲು ತಮಗೆ ಬೇಕಾದಂತೆ ಮಾಡುವುದರಿಂದ ಎಲ್ಲಾ ನಾಗರಿಕರು ತೊಂದರೆಯನ್ನು ಅನುಭವಿಸಬೇಕಾಗಿದೆ. ಕೆಲವರು ಮೂರು ದಿನದಿಂದ ಟೋಕನಿಗಾಗಿ ಬಂದು ಹೋಗುತ್ತಿದ್ದಾರೆ. ಕೆಲವರು ಎರಡು ದಿನದಿಂದ. ಆದರೂ ಇವರಿಗೆ ಟೋಕನ್ ಮಾತ್ರ ಸಿಗಲೇ ಇಲ್ಲ. ಕೆಲವರು ದೂರದಿಂದ ಆಟೋ ಮಾಡಿಕೊಂಡು ಬಂದು ಶಾಲೆ ಮಕ್ಕಳನ್ನು ರಜೆ ಮಾಡಿಸಿ ಬಂದು ಹೋಗುವುದೇ ಆಗಿದೆ. ಕೆಲವರು ಕೂಲಿ ಕೆಲಸದವರು ರಜೆ ಮಾಡಿ ಎರಡು ದಿನದಿಂದ ಅಲೆದಾಡುತ್ತಿದ್ದಾರೆ.

ಇಂತಹ ಆ ವ್ಯವಸ್ಥೆಯ ಆಗರವಾಗಿರುವ ಗ್ರಾಮ ಪಂಚಾಯತ್‌ನಿಂದ ಜನರ ಭಾವನೆಗಳಿಗೆ ಧಕ್ಕೆಯಾಗುತ್ತಿದೆ. ಇದಕ್ಕೆ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಯಾವುದೇ ಕಚೇರಿಗಳು ವ್ಯವಸ್ಥಿತವಾಗಿ ನಡೆಯುವ ಹಾಗೆ ಗಮನಹರಿಸಬೇಕಾಗಿದೆ. ಇದರಿಂದ ಎಷ್ಟೋ ಜನರು ಅವರವರ ಉದ್ಯೋಗ ಬಿಟ್ಟು ಇದಕ್ಕಾಗಿ ಕಾಯುವಂತಹ ಸ್ಥಿತಿ ನಿರ್ಮಾಣ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!