ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸದಾಗಿ ಚುನಾಯಿತರಾದ ನೇಪಾಳದ ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರನ್ನು ಕಠ್ಮಂಡುವಿನ ಮಹಾರಾಜ್‌ಗಂಜ್‌ನಲ್ಲಿರುವ ತ್ರಿಭುವನ್ ವಿಶ್ವವಿದ್ಯಾಲಯದ ಬೋಧನಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ತಡರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿಗಾ ವಹಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ವಾರಗಳ ಹಿಂದೆಯಷ್ಟೇ ನೇಪಾಳದ ಹಿರಿಯ ಕಾಂಗ್ರೆಸ್ ನಾಯಕ ರಾಮಚಂದ್ರ ಪೌಡೆಲ್ ನೇಪಾಳದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ನೇಪಾಳದ ಚುನಾವಣಾ ಆಯೋಗದ ಪ್ರಕಾರ, ಪ್ರತಿಸ್ಪರ್ಧಿ ಸುಭಾಷ್ ಚಂದ್ರ ನೆಂಬ್ವಾಂಗ್ ವಿರುದ್ಧ ಪೌಡೆಲ್ 33,802 ಚುನಾವಣಾ ಮತಗಳನ್ನು ಪಡೆದು ಜಯಶೀಲರಾದರು.