ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಸಂಘರ್ಷ ಮುಂದುವರೆದಿದ್ದು, ಹಮಾಸ್ ಬಂಡುಕೋರರು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೂ ಕದನ ವಿರಾಮವಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಹಮಾಸ್ ಉಗ್ರರು ಅಪಹರಿಸಿರುವ ಆರು ಮಂದಿ ಅಮೆರಿಕನ್ನರು ಸೇರಿದಂತೆ 12ಕ್ಕೂ ಹೆಚ್ಚು ಒತ್ತೆಯಾಳುಗಳ ಬಿಡುಗಡೆಗೆ ಮಾತುಕತೆಗಳು ನಡೆಯುತ್ತಿವೆ. ಈ ನಡುವೆ ನೆತನ್ಯಾಹು ಯುದ್ಧ ವಿರಾಮದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
“ಇತ್ತೀಚಿನ ದಿನಗಳಲ್ಲಿ ನಾವು ಕೇಳುತ್ತಿರುವ ಎಲ್ಲಾ ರೀತಿಯ ಸುಳ್ಳು ವದಂತಿಗಳಿಗೆ ಕೊನೆ ಹಾಡಲು ಬಯಸುತ್ತೇನೆ. ನಮ್ಮ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೂ ಯಾವುದೇ ಕದನ ವಿರಾಮ ಇಲ್ಲ ಎಂದು ಸ್ಪಷ್ಟವಾಗಿ ಪುನರುಚ್ಚರಿಸುತ್ತಿದ್ದೇನೆ” ಎಂದು ನೆತನ್ಯಾಹು ತಿಳಿಸಿದ್ದಾರೆ. ಈ ಮೂಲಕ ಕದನ ವಿರಾಮ ಸಾಧ್ಯತೆಯನ್ನು ಬೆಂಜಮಿನ್ ಅಲ್ಲಗಳೆದಿದ್ದಾರೆ
ಮಾನವೀಯ ನೆಲೆಯಲ್ಲಿ ಇಸ್ರೇಲ್ ಯುದ್ಧಕ್ಕೆ ಸಣ್ಣ ವಿರಾಮ ನೀಡಲಿದೆ ಎಂದು ವರದಿಯಾಗಿತ್ತು. ಆದರೆ ಇಂತಹ ವದಂತಿಗಳನ್ನು ಇಸ್ರೇಲ್ ಪ್ರಧಾನಿ ತಳ್ಳಿ ಹಾಕಿದ್ದಾರೆ.
.