ಹೊಸದಿಗಂತ ಡಿಜಿಟಲ್ ಡೆಸ್ಕ್:
ಓಟಿಟಿ ಪ್ಲಾಟ್‌ಫಾರ್ಮ್ ನಲ್ಲಿ ಹೆಚ್ಚು ಜನಪ್ರಿಯತೆಗಳಿಸಿರುವ ನೆಟ್‌ಫ್ಲಿಕ್ಸ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಅದೇನೆಂದರೆ ಭಾರತದಲ್ಲಿ ಇನ್ನುಮುಂದೆ ಪಾಸ್‌ವರ್ಡ್‌ಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಅವಕಾಶವಿಲ್ಲ ಎಂದು ಘೋಷಿಸಿದೆ.
ನೆಟ್‌ಫ್ಲಿಕ್ಸ್ (Netflix) ಒಂದು ಖಾತೆಯನ್ನು ಒಂದು ಮನೆಯವರು ಮಾತ್ರ ಬಳಕೆ ಮಾಡಲು ಸಾಧ್ಯವಿದೆ ಎಂದು ಕಂಪನಿ ಹೇಳಿದೆ. ಈ ಕುರಿತು ನೆಟ್‌ಫ್ಲಿಕ್ಸ್ ಇಮೇಲ್ ಕೂಡ ರವಾನಿಸುತ್ತಿದೆ.
ಕಂಪನಿಯ ಪ್ರಕಾರ, ಒಂದು ಖಾತೆಯನ್ನು ಒಂದು ಮನೆಯಲ್ಲಿ ಮಾತ್ರ ಬಳಸಬೇಕು. ಜೊತೆಗೆ ಪ್ರೊಫೈಲ್ ವರ್ಗಾವಣೆಯ ಪ್ರಯೋಜನವನ್ನೂ ಪಡೆಯಬಹುದು ಎಂದು ತಿಳಿಸಿದೆ. ಈ ಹಿಂದೆ ನೆಟ್‌ಫ್ಲಿಕ್ಸ್ ಭಾರತದ ಹೊರಗೆ ಪಾಸ್‌ವರ್ಡ್ ಹಂಚಿಕೆಯನ್ನ ನಿಷೇಧಿಸಿತ್ತು. ಆದರೆ ಪಾಸ್‌ವರ್ಡ್ ಶೇರಿಂಗ್ ನಿಷೇಧಿಸಿದ ನಂತರ ಚಂದಾದಾರರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ ಎಂದು ಕಂಪನಿ ಹೇಳಿದೆ.
ನೆಟ್‌ಫ್ಲಿಕ್ಸ್ ಭಾರತ ಸೇರಿದಂತೆ ಇಂಡೋನೇಷ್ಯಾ, ಪ್ರೊಯೇಷಿಯಾ ಮತ್ತು ಕೀನ್ಯಾದಂತಹ ಇತರ ದೇಶಗಳಲ್ಲಿ ಇಂದಿನಿಂದ ಪಾಸ್‌ವರ್ಡ್ ಹಂಚಿಕೆಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.