ಕನ್ನಡದ ಸೂಪರ್ ಹಿಟ್ ಸಿನಿಮಾದ ಸ್ಟ್ರೀಮಿಂಗ್ ನಿಲ್ಲಿಸಿದ Netflix : ಆ ಚಿತ್ರ ಯಾವುದು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪವನ್ ಕುಮಾರ್ ನಿರ್ದೇಶನದ ಕನ್ನಡ ಚಿತ್ರರಂಗದ ಸೂಪರ್ ಹಿಟ್ ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳಲ್ಲಿ ಒಂದಾದ ‘ಯೂ ಟರ್ನ್’ ಅನ್ನು ನೆಟ್​ಫ್ಲಿಕ್ಸ್​ ತನ್ನ ವೇದಿಕೆಯಿಂದ ತೆಗೆದು ಹಾಕುತ್ತಿದೆ.

ಈ ಕುರಿತು ಸಿನಿಮಾದ ನಿರ್ದೇಶಕ ಪವನ್ ಅವರು ಮಾಹಿತಿ ಹಂಚಿಕೊಂಡಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಮೊದಲ ಕನ್ನಡ ಚಿತ್ರವಾಗಲು ಇದು ಒಂದು ಸೌಭಾಗ್ಯ, ಈ ಪ್ರಯಾಣ 9 ವರ್ಷಗಳ ಹಿಂದೆ ಪ್ರಾರಂಭವಾಯಿತು ಮತ್ತು ಒಪ್ಪಂದವು ಈ ತಿಂಗಳು ಕೊನೆಗೊಂಡಿತು. ನೆಟ್‌ಫ್ಲಿಕ್ಸ್‌ಗೆ ಧನ್ಯವಾದಗಳು, 9 ವರ್ಷಗಳ ಕಾಲ ನಿಮ್ಮ ವೇದಿಕೆಯಲ್ಲಿ ಉಳಿಯಲು ಮತ್ತು ಪ್ರಪಂಚದಾದ್ಯಂತ ಲಕ್ಷಾಂತರ ವೀಕ್ಷಕರಿಗೆ ಲಭ್ಯವಾಗುವಂತೆ ಮಾಡಿದ್ದಕ್ಕೆ ಸಂತೋಷವಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ಯೂ ಟರ್ನ್’ ನೆಟ್​ಫ್ಲಿಕ್ಸ್​ಗೆ ಮಾರಾಟವಾದ ಮೊಟ್ಟ ಮೊದಲ ಕನ್ನಡ ಸಿನಿಮಾ. ಆಗೆಲ್ಲ ಸಿನಿಮಾದ ಎಲ್ಲ ಹಕ್ಕುಗಳನ್ನು ಯಾವುದೋ ಒಂದು ಸಂಸ್ಥೆಗೆ ಒಟ್ಟಿಗೆ ಮಾರಾಟ ಮಾಡುವ ರೂಢಿ ಇತ್ತು. ಇದರಿಂದ ನಿರ್ಮಾಪಕರಿಗೆ ಕಡಿಮೆ ಲಾಭ ಸಿಗುತ್ತಿತ್ತು. ಇದರ ಬಗ್ಗೆ ಅರಿವಿದ್ದ ನಾನು, ನಮ್ಮ ನಿರ್ಮಾಪಕರನ್ನು ಒಪ್ಪಿಸಿ ಸಿನಿಮಾದ ಹಕ್ಕುಗಳನ್ನು ಬೇರೆ ಬೇರೆ ಕಂಪೆನಿಗಳಿಗೆ, ಥರ್ಡ್ ಪಾರ್ಟಿ ಅಪ್ಲಿಕೇಶನ್​ಗಳಿಗೆ ಮಾರಾಟ ಮಾಡಿದೆ. ಇದರಿಂದ ಬಹಳ ದೊಡ್ಡ ಲಾಭವೇ ಆಯ್ತು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here