VIRAL VIDEO| ಶ್ವಾನವನ್ನು ರಕ್ಷಿಸಲು ತಮ್ಮ ಪ್ರಾಣ ಪಣಕ್ಕಿಟ್ಟ ಮಕ್ಕಳು, ನೆಟ್ಟಿಗರಿಂದ ಪ್ರಶಂಸೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಹಲವೆಡೆ ಮನೆಗಳು ಮುಳುಗಿವೆ, ಮರಗಳು ಮುರಿದು ಬಿದ್ದಿವೆ, ರಸ್ತೆಗಳು ಕಡಿತಗೊಂಡಿವೆ, ಪ್ರವಾಹದ ನೀರಿನಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡ ಮೂಕ ಜೀವಿಗಳ ಬಗ್ಗೆ ಹೇಳತೀರದು. ಭಾರೀ ನೀರು ಹರಿಯುತ್ತಿದ್ದ ಚರಂಡಿಯಲ್ಲಿ ಶ್ವಾನವೊಂದು ಸಿಲುಕಿಕೊಂಡಿದ್ದು, ಅದನ್ನು ರಕ್ಷಿಸಲು ಇಬ್ಬರು ಪುಟ್ಟ ಬಾಲಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಳೆ ಮತ್ತು ಪ್ರವಾಹದಿಂದಾಗಿ ಬೀದಿಗಳಲ್ಲಿ ಓಡಾಡುವ ನಾಯಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಕೆಲವರು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿವೆ. ಇನ್ನೂ ಕೆಲವು ಜನರ ರಕ್ಷಣೆಗೊಳಗಾಗಿವೆ. ಅದರಂತೆ ಈ ನಾಯಿಯೂ ಕೂಡ. ವೇಗವಾಗಿ ಹರಿಯುವ ಚರಂಡಿಯ ಇನ್ನೊಂದು ಬದಿಯಲ್ಲಿ ನಾಯಿಯೊಂದು ಸಿಲುಕಿಕೊಂಡಿತು. ಚರಂಡಿ ದಾಟಲು ಆಸರೆ ಸಿಗದೇ ಪರದಾಡುವ ವೇಳೆ ಆ ಮಾರ್ಗವಾಗಿ ಹೋಗುತ್ತಿದ್ದ ಇಬ್ಬರು ಪುಟ್ಟ ಬಾಲಕರು ನಾಯಿಯನ್ನು ರಕ್ಷಿಸಲು ಹರಸಾಹಸಪಟ್ಟರು.

ಈ ಮಕ್ಕಳು ತಡಮಾಡದೆ ಚರಂಡಿಗೆ ಇಳಿದು ಭಯದಲ್ಲಿ ನೋಡುತ್ತಿದ್ದ ನಾಯಿಯನ್ನು ಪ್ರೀತಿಯಿಂದ ತಲೆ ಸವರಿ ಆಚೆಗೆ ತಂದರು. ಇನ್‌ಸ್ಟಾಗ್ರಾಮ್ ಬಳಕೆದಾರರು arya_vamshi17 ‘ಸೂಪರ್‌ಹೀರೋಸ್.. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಮೂಕ ಜೀವಿಗಳನ್ನು ಹೇಗೆ ನಡೆಸಿಕೊಳ್ಳಬೇಕೆಂದು ಕಲಿಸಬೇಕು’ ಎಂಬ ಶೀರ್ಷಿಕೆ ನೀಡಿ ವೀಡಿಯೊ ಹಂಚಿಕೊಂಡಿದ್ದಾರೆ.

ವಿಡಿಯೋ ವೈರಲ್‌ ಆಗುತ್ತಿದ್ದು, ಮಕ್ಕಳಿಬ್ಬರ ಬದುಕು ಬಂಗಾರವಾಗಲಿ ಎಂದು ವೀಕ್ಷಕರು ಹರಸುತ್ತಿದ್ದಾರೆ. ಆಪತ್ತು ಬರುತ್ತದೆ ಎಂದು ಯೋಚಿಸದೆ ನಾಯಿಯ ಪ್ರಾಣ ಉಳಿಸಿದರು..ಇವರಿಗೊಂದು ಹ್ಯಾಟ್ಸಾಫ್’ ಎಂದು ಕಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!