ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿಯಲ್ಲಿ ಮಳೆಯ ಪ್ರಮಾಣವು ಇಳಿಕೆಯಾಗಿದ್ದು, ಈ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ- ಕುಮಾರಧಾರ ನದಿ ನೀರಿನ ಮಟ್ಟವು ಮಂಗಳವಾರ ಬೆಳಗ್ಗಿನಿಂದಲೇ ಇಳಿಕೆಯಾಗತೊಡಗಿದ್ದು, ಸಂಜೆ ವೇಳೆ ೨೮.೨ ಮೀಟರ್ ಎತ್ತರದಲ್ಲಿ ನೀರಿ ಹರಿವು ಕಂಡು ಬಂದಿದೆ.
ನದಿಯ ನೀರಿನ ಅಪಾಯದ ಮಟ್ಟ ೩೧.೫ ಆಗಿದ್ದು, ನದಿಯ ನೀರಿನ ಮಟ್ಟದಲ್ಲಿ ಇಳಿಮುಖವಾಗುತ್ತಿರುವುದರಿಂದ ನೆರೆ ಭೀತಿ ನಿವಾರಣೆಯಾಗಿದೆ.
ಕಳೆದ ಹಲವು ದಿನಗಳಿಂದ ಉತ್ತಮ ಮಳೆಯಾದ ಹಿನ್ನೆಲೆ ನದಿಗಳು ಮೈದುಂಬಿ ಹರಿಯುತ್ತಿದೆ . ಆದ್ರೆ ಯಾವುದೇ ಅಪಾಯದ ಭೀತಿ ಇಲ್ಲ.