ರುಚಿಕರವಾಗಿರುವ ಮೆಕ್ಕೆಜೋಳದಲ್ಲಿ ಮೆಗ್ನೀಷಿಯಂ, ಐರನ್, ಕಾಪರ್, ಜಿಂಕ್ನಂತಹ ಅತ್ಯುತ್ತಮವಾದ ಪೋಷಕಾಂಶಗಳು ಹೇರಳವಾಗಿ ಇರುತ್ತವೆ.
ಇವು ದೇಹದಲ್ಲಿ ಚಯಾಪಚಯ ಕ್ರಿಯೆಯನ್ನ ಸರಾಗವಾಗಿ ನಡೆಯುವಂತೆ ಸಹಾಯ ಮಾಡುತ್ತವೆ. ಸ್ವೀಟ್ ಕಾರ್ನ್ನಲ್ಲಿ ಅತಿ ಹೆಚ್ಚು ಫೈಬರ್ ಅಂಶ ಇರುವುದರಿಂದ ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆ ಆಗುತ್ತದೆ.
ಮೆಕ್ಕೆಜೋಳದಲ್ಲಿರುವ ಪೋಷಕಾಂಶಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಇನ್ನಷ್ಟು ಬಲಗೊಳಿಸಿ ಅನೇಕ ರೋಗಗಳಿಂದ ದೇಹವನ್ನು ರಕ್ಷಣೆ ಮಾಡುತ್ತದೆ.
ಮೂಳೆ ಬಲವಾಗಲು, ಕಿಡ್ನಿ ಆರೋಗ್ಯಕ್ಕೆ ಹಾಗೂ ಹೃದಯ ಯಾವುದೇ ಸಮಸ್ಯೆ ಇಲ್ಲದೇ ಕೆಲಸ ಮಾಡಲು ಮೆಕ್ಕೆಜೋಳದಲ್ಲಿನ ಅಂಶಗಳು ಅತ್ಯಂತ ಸಹಾಯಕವಾಗಿವೆ. ಇನ್ನು ದೇಹ ಸ್ವಲ್ಪ ದಪ್ಪವಾಗಲಿ ಎನ್ನುವವರಿಗೆ ಮೆಕ್ಕೆಜೋಳ ಅದ್ಭುತವಾದ ಆಯ್ಕೆ ಎಂದು ಹೇಳಬಹುದು.
ಒಂದು ಕಪ್ ಸ್ವೀಟ್ಕಾರ್ನ್ನಲ್ಲಿ ಸುಮಾರು 342 ಕ್ಯಾಲರಿ ಇರುತ್ತದೆ. ಇದು ಆರೋಗ್ಯಕರವಾಗಿ ದೇಹದ ತೂಕ ಹೆಚ್ಚಾಗಲು ಸಹಾಯ ಮಾಡುತ್ತದೆ. ಇದರಲ್ಲಿನ ಆಂಟಿಆಕ್ಸಿಡೆಂಟ್ಗಳು ಕೆಲವು ರೀತಿಯ ಕ್ಯಾನ್ಸರ್ಗಳನ್ನ ತಡೆಯಲು ಸಹಾಯ ಮಾಡುತ್ತವೆ. ಮುಖ್ಯವಾಗಿ ಕರುಳಿನ ಕ್ಯಾನ್ಸರ್ ತಡೆಯುವಲ್ಲಿ ಮೆಕ್ಕೆಜೋಳ ಮುಖ್ಯವಾದ ಪಾತ್ರವಹಿಸುತ್ತದೆ.