June 6, 2026
Saturday, June 6, 2026
spot_img

ಮಲಗಿರುವ ಸಿಂಹವನ್ನು ಎಂದಿಗೂ ಎಬ್ಬಿಸಬೇಡಿ: ನಟ ಜಯಂ ರವಿ ಮಾತಿಗೆ ಪತ್ನಿ ಆರತಿ ಖಡಕ್ ವಾರ್ನಿಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ನಟ ಜಯಂ ರವಿ ಮತ್ತು ಅವರ ಪತ್ನಿ ಆರತಿ ನಡುವಿನ ದಾಂಪತ್ಯ ಕಲಹ ಬೀದಿ ರಂಪಾಟವಾಗಿದೆ. ಕೋರ್ಟ್ ಮೆಟ್ಟಿಲೇರಿದ್ದ ಈ ಜೋಡಿ ಇದೀಗ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿರುವುದು ಅಭಿಮಾನಿಗಳಿಗೆ ಆಘಾತ ನೀಡಿದೆ.

ಶನಿವಾರ ಜಯಂ ರವಿ ಅವರ ಪತ್ರಿಕಾಗೋಷ್ಠಿ ನಡೆಸಿ ಆಕ್ರೋಶ ಹಾಕಿದ್ದು, ಈ ಬೆನ್ನಲ್ಲೇ ಇಂದು ಆರತಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಮಲಗಿರುವ ಸಿಂಹವನ್ನು ಎಂದಿಗೂ ಎಬ್ಬಿಸಬೇಡಿ

ಪತ್ನಿ ಆರತಿ ಇನ್‌ಸ್ಟಾಗ್ರಾಂನಲ್ಲಿ ಒಂದು ಸುದೀರ್ಘ ಪೋಸ್ಟ್ ಹಾಕಿದ್ದು, ‘ಮಲಗಿರುವ ಸಿಂಹವನ್ನು ಎಂದಿಗೂ ಎಬ್ಬಿಸಬೇಡಿ. ಆ ಸಿಂಹ ತಾಯಿಯಾಗಿದ್ದರೆ ದೇವರೇ ನಿಮ್ಮನ್ನು ಕಾಪಾಡಬೇಕು. ನನ್ನ ಗೌರವದ ಮೌನವನ್ನು ಯಾರೂ ದೌರ್ಬಲ್ಯ ಎಂದು ಭಾವಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ನನ್ನ ಮಕ್ಕಳು ಮತ್ತು ಆತ್ಮಗೌರವಕ್ಕೆ ಧಕ್ಕೆಯಾದರೆ ನಾನು ಮೌನವಾಗಿ ಇರುತ್ತೇನೆ ಎಂದು ಭಾವಿಸಬೇಡಿ. ಜಗತ್ತಿಗೆ ಸತ್ಯವನ್ನು ತಿಳಿಸಲು ಸಿದ್ಧಳಿದ್ದೇನೆ. ಅಂತಿಮವಾಗಿ ಸತ್ಯವೇ ಗೆಲ್ಲುತ್ತದೆ ಎಂದು ಜಯಂ ರವಿ ಅವರ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

ಇತ್ತ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಜಯಂ ರವಿ, 23 ವರ್ಷಗಳಿಂದ ಚಿತ್ರರಂಗದಲ್ಲಿ ಹಗಲಿರುಳು ದುಡಿದಿದ್ದೆಲ್ಲವೂ ನನ್ನ ಕುಟುಂಬಕ್ಕಾಗಿ ಖರ್ಚು ಮಾಡಿದೆ. ಇಡೀ ನನ್ನ ಮನೆಯ ಜವಾಬ್ದಾರಿ ಹೊತ್ತಿದ್ದೆ. ಆದರೆ ನನಗೆ ಸಿಕ್ಕಿದ್ದು ಮಾತ್ರ ಕೇವಲ ಕಿರುಕುಳ ಎಂದು ಭಾವುಕರಾಗಿದ್ದರು.

ಇದೇ ವೇಳೆ ವಿಚ್ಛೇದನದ ಕುರಿತು ಮಾತನಾಡಿದ್ದ ರವಿ, ನಾನು ನನ್ನ ಮಕ್ಕಳಿಗಾಗಿ ಬದುಕಿದ್ದೆ.ಇಂದು ನನಗೆ ನನ್ನ ಸ್ವಂತ ಮಕ್ಕಳನ್ನೇ ನೋಡಲು ಬಿಡುತ್ತಿಲ್ಲ. ಒಮ್ಮೆ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ ಎಂದು ಹೇಳುವ ಮೂಲಕ ಕಣ್ಣೀರಿಟ್ಟಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !