ಬೆಂಗಳೂರಿನ ಪಿಜಿಗಳಿಗೆ ಹೊಸ ಮಾರ್ಗಸೂಚಿ, ಇನ್ಮುಂದೆ ಐಡಿ ಕಾರ್ಡ್ ಕಡ್ಡಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ಬೆಂಗಳೂರಿನಲ್ಲಿ ಕಾಲೇಜುಗಳು, ಉದ್ಯೋಗಗಳು, ಉದ್ಯೋಗ ಅವಕಾಶ ಹೆಚ್ಚಾಗುತ್ತಿದ್ದಂತೆಯೇ ನಗರದಲ್ಲಿ ಪಿಜಿ(Paying guest)ಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಪಿಜಿಗಳಲ್ಲಿ ಅಕ್ರಮ ಚಟುವಟಿಕೆ, ಪಿಜಿಯಲ್ಲಿ ಸ್ನೇಹಿತರನ್ನು ತಂದಿರಿಸುವುದು ಹೀಗೆ ಸಮಸ್ಯೆಗಳಿಂದ ದೂರ ಇರೋದಕ್ಕೆ ಪೊಲೀಸ್ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿತ್ತು.

ಅದರಂತೆಯೇ ಪಿಜಿ ಅಸೋಸಿಯೇಷನ್ ಹೊಸದೊಂದು ನಿರ್ಧಾರಕ್ಕೆ ಬಂದಿದ್ದು, ಇನ್ಮುಂದೆ ಪಿಜಿಗಳಲ್ಲಿ ಐಡಿ ಕಾರ್ಡ್ ಕಡ್ಡಾಯ ಮಾಡುವ ಆಲೋಚನೆ ಮಾಡಲಾಗಿದೆ. ಅಡ್ಮಿಶನ್ ಆಗುವ ಪ್ರತೀ ಸದಸ್ಯರಿಗೆ ಪಿಜಿ ಕಾರ್ಡ್ ನೀಡುವುದು. ಇದನ್ನು ಬಳಸಿಯೇ ಒಳಗೆ ಬರುವುದಕ್ಕೆ ಅನುಮತಿ ನೀಡಲಾಗುತ್ತದೆ.

ಪ್ರತಿ ತಿಂಗಳು ಕಾರ್ಡ್‌ನ್ನು ರಿನಿವಲ್ ಮಾಡಿಕೊಡಲಾಗುತ್ತದೆ. ಇದರಿಂದ ಪಿಜಿಯಲ್ಲಿ ಇರುವವರ ಸುರಕ್ಷತೆ ಸಾಧ್ಯವಾಗುತ್ತದೆ. ಇದರ ಜೊತೆಗೆ ಸ್ನೇಹಿತರು ಹಾಗೂ ಪೋಷಕರ ಸರಿಯಾದ ನಂಬರ್ ಪಡೆದು ಅವರ ಜೊತೆಯಲ್ಲಿಯೂ ಸಂಪರ್ಕದಲ್ಲಿ ಇರುವ ಬಗ್ಗೆ ಆಲೋಚನೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!