ರೈಲ್ವೆ ಸಚಿವಾಲಯದ ಅಡಿಯಲ್ಲಿ ಕೇಂದ್ರೀಯ ಸಾರ್ವಜನಿಕ ವಲಯದ ಉದ್ದಿಮೆಯಾದ ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (ಐಆರ್‌ಸಿಟಿಸಿ) ಬೆಂಗಳೂರಿನಿಂದ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಪ್ರವಾಸದ ಪ್ಯಾಕೇಜ್‌ಗಳನ್ನು ಪ್ರಾರಂಭಿಸಿದೆ.
ಈ ಮೂಲಕ ಐಆರ್‌ಸಿಟಿಸಿ, ದೇಶ ಮತ್ತು ವಿದೇಶದ ಅನೇಕ ಪ್ರವಾಸಿ ಸ್ಥಳಗಳಿಗೆ ಕೈಗೆಟುಕುವ ಬೆಲೆಯಲ್ಲಿ ಜನರು ತಮ್ಮ ಕನಸಿನ ಸ್ಥಳಕ್ಕೆ ಪ್ರವಾಸ ಮಾಡುವ ಅವಕಾಶ ಮಾಡಿಕೊಟ್ಟಿದೆ.
ಪ್ಯಾಕೇಜ್ ನಲ್ಲಿ ಪ್ರವಾಸ ವಿಮೆ, ಪ್ರಯಾಣದ ವೆಚ್ಚ, ಆಹಾರ, ವಾಸ್ತವ್ಯ, ದೃಶ್ಯವೀಕ್ಷಣೆ ಸೇರಿದಂತೆ ಅನೇಕ ವೆಚ್ಚಗಳನ್ನು ಕೂಡ ಸೇರ್ಪಡೆಯಾಗಿದೆ.
- ಲಡಾಖ್‌ಗೆ 7 ದಿನಗಳ ಪ್ರವಾಸ ಆ.13ಕ್ಕೆ ಆರಂಭವಾಗಲಿದೆ. ಲೇಹ್, ಶಾಮ್ ವ್ಯಾಲಿ , ನುಬ್ರಾ, ತುರ್ತುಕ್ ಮತ್ತು ಪಾಂಗಾಂಗ್‌ಗಳನ್ನು ಒಳಗೊಂಡ ಈ ಪ್ರವಾಸಕ್ಕೆ ಒಬ್ಬರಿಗೆ 57,950 ರೂ. ದರ ಇರಲಿದೆ.
- ಮಧ್ಯಪ್ರದೇಶದ ಜ್ಯೋತಿರ್ಲಿಂಗಗಳು 4 ದಿನಗಳ ಪ್ರವಾಸ ಆ.21ಕ್ಕೆ ಆರಂಭವಾಗಲಿದ್ದು, ಓಂಕಾರೇಶ್ವರ, ಮಹಾಕಾಲೇಶ್ವರ ಮತ್ತು ಇಂದೋರ್‌ಗಳಿಗೆ ಭೇಟಿ ಇರಲಿದೆ. ರೂ.24,600 ಪ್ರವಾಸ ದರ ನಿಗದಿಯಾಗಿದೆ.