ಹೊಸದಿಗಂತ ಡಿಜಿಟಲ್ ಡೆಸ್ಕ್:
ಫ್ಲೋರಿಡಾದ ಟ್ಯಾಂಪಾ ನಗರದಿಂದ ನ್ಯೂಜೆರ್ಸಿಗೆ ತೆರಳುತಿದ್ದ ವಿಮಾನದಲ್ಲಿ ಹಾವು ಕಂಡುಬಂದಿದ್ದು, ಪ್ರಯಾಣಿಕರು ಭಯಭೀತರಾಗಿರುವ ಘಟನರ ಯುನೈಟೆಡ್ ವಿಮಾನದಲ್ಲಿ ಕಂಡುಬಂದಿದೆ. ನೆವಾರ್ಕ್ ಲಿಬರ್ಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಾವನ್ನು ರಕ್ಷಣೆ ಮಾಡಲಾಯಿತು.
ವಿಮಾನ ನಿಲ್ದಾಣದ ವನ್ಯಜೀವಿ ಕಾರ್ಯಾಚರಣೆ ಸಿಬ್ಬಂದಿ ಮತ್ತು ಪೋರ್ಟ್ ಅಥಾರಿಟಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಯುನೈಟೆಡ್ ಫ್ಲೈಟ್ 2038ರಲ್ಲಿದ್ದ ʻಗಾರ್ಟರ್ ಹಾವುʼ ಅನ್ನು ಹಿಡಿದು ನಂತರ ಅದನ್ನು ಕಾಡಿಗೆ ಬಿಡುಗಡೆ ಮಾಡಿದ್ದಾರೆ ಎಂದು ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯ ಪೋರ್ಟ್ ಅಥಾರಿಟಿ ಹೇಳಿಕೆಯಲ್ಲಿ ತಿಳಿಸಿದೆ.
ಯಾರಿಗೂ ಯಾವುದೇ ರೀತಿಯ ತೊಂದರೆಯಾಗಿಲ್ಲ ಮತ್ತು ಕಾರ್ಯಾಚರಣೆಗೆ ಸಹ ಅಡಚಣೆ ಉಂಟಾಗಿಲ್ಲ ಎಂದು ಹೇಳಿಕೆ ತಿಳಿಸಿದೆ.
ಹಾವನ್ನು ಸೆರೆಹಿಡಿದ ಬಳಿಕ ಪ್ರಯಾಣಿಕರು ತಮ್ಮ ಸಾಮಾನು ಸರಂಜಾಮುಗಳೊಂದಿಗೆ ಕೆಳಗಿಳಿದರು. ಈ ಹಾವು ವಿಷಕಾರಿಯಲ್ಲ ಎಂದು ತಿಳಿದುಬಂದಿದೆ.