ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾರಕ್ಕೆ 70 ಗಂಟೆ ಕೆಲಸ ಅನ್ನೋ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಹೊಸ ನಿಯಮಕ್ಕೆ ಒಪ್ಪಿಗೆ ಸಿಕ್ಕಿದ್ದು, ಇನ್ಮುಂದೆ ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸ!
ಹೌದು, ಉದ್ಯೋಗಿ ತನಗಾಗಿ ಮತ್ತು ತನ್ನ ಕುಟುಂಬಕ್ಕಾಗಿ ಸಮಯ ಮೀಸಲಿಡಬೇಕು. ಇದರಿಂದ ಜೀವನದ ಒತ್ತಡ ಕಡಿಮೆ ಆಗುತ್ತದೆ. ಜತೆಗೆ ಸ್ವಲ್ಪ ಸಮಯದವರೆಗೆ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತದೆ. ಹಾಗಾಗಿ ಉದ್ಯೋಗಿಗಳ ಉತ್ತಮ ಜೀವನಕ್ಕಾಗಿ ವಾರದಲ್ಲಿ 4 ದಿನ ಮಾತ್ರ ಕೆಲಸ ಇರಬೇಕು ಎಂದು ಯುಕೆ ಕಂಪನಿಗಳು ಒಂದು ನಿರ್ಧಾರಕ್ಕೆ ಬಂದಿವೆ. ಆದ್ದರಿಂದಲೇ ವಾರದಲ್ಲಿ 4 ದಿನ ಕೆಲಸ, 3 ದಿನ ರಜೆ ಅನ್ನೋ ಒಪ್ಪಂದಕ್ಕೆ ಬರೋಬ್ಬರಿ 200 ಕಂಪನಿಗಳು ಸಹಿ ಹಾಕಿವೆ.
ಇನ್ಮುಂದೆ 200 UK ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವಾರಕ್ಕೆ 3 ದಿನ ರಜೆ ನೀಡುತ್ತವೆ. 3 ದಿನ ರಜೆ ನೀಡಿದ ಮಾತ್ರಕ್ಕೆ ವೇತನದಲ್ಲಿ ಯಾವುದೇ ಕಡಿತ ಮಾಡಲ್ಲ ಎಂದಿವೆ ಕಂಪನಿಗಳು. ಈ 200 ಕಂಪನಿಗಳಲ್ಲಿ ಒಟ್ಟು 5,000ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.