ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುಟ್ಯೂಬ್ ಹೊಸ ರೂಲ್ಸ್ ಒಂದನ್ನು ಮಾಡಿದೆ. 16 ವರ್ಷಕ್ಕಿಂತ ಕೆಳಗಿನವರು ಯುಟ್ಯೂಬ್‌ನಲ್ಲಿ ಈ ಒಂದು ಕೆಲಸವನ್ನು ಮಾಡುವಂತಿಲ್ಲ. ಯಾವ ಕೆಲಸ ಗೊತ್ತಾ?
ಲೈವ್ ಸ್ಟ್ರೀಮಿಂಗ್ ಹೌದು, ಪ್ರತಿ ದಿನ ಏನು ಮಾಡ್ತಾರೆ ಅನ್ನೋದನ್ನೇ ಯೂಟ್ಯೂಬರ್ ಜನರಿಗೆ ತೋರಿಸ್ತಾರೆ. ಅದನ್ನು ಕುತೂಹಲದಿಂದ ನೋಡುವ ಕಣ್ಣುಗಳು ಸಾಕಷ್ಟಿವೆ. ಲೈವ್ ಸ್ಟ್ರೀಮಿಂಗ್ ಮಾಡಿ ಲಕ್ಷಾಂತರ ರೂಪಾಯಿ ಗಳಿಸುವ ಮಕ್ಕಳು ನಮ್ಮಲ್ಲಿದ್ದಾರೆ.
ಈಗ ಯೂಟ್ಯೂಬ್ ತನ್ನ ಲೈವ್ಸ್ಟ್ರೀಮಿಂಗ್ ರೂಲ್ಸ್ ನಲ್ಲಿ ದೊಡ್ಡ ಬದಲಾವಣೆ ಮಾಡಲು ಮುಂದಾಗಿದೆ. ಜುಲೈ 22 ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಅದರ ಪ್ರಕಾರ, ಎಲ್ಲ ಮಕ್ಕಳೂ ಒಂಟಿಯಾಗಿ ಲೈವ್ ಸ್ಟ್ರೀಮಿಂಗ್ ಮಾಡಲು ಸಾಧ್ಯವಿಲ್ಲ. ಲೈವ್ ಸ್ಟ್ರೀಮಿಂಗ್ ಗೆ ಯೂಟ್ಯೂಬ್ ಮೊದಲೇ ವಯಸ್ಸಿನ ಮಿತಿ ನಿಗದಿಪಡಿಸಿದೆ. ಆದರೆ ಈಗ ಈ ವಯಸ್ಸಿನ ಮಿತಿಯನ್ನು ಹೆಚ್ಚಿಸಿದೆ.
ಕನಿಷ್ಠ 16 ವರ್ಷ ವಯಸ್ಸಾದ ಮಕ್ಕಳು ಮಾತ್ರ ಯೂಟ್ಯೂಬ್ ಚಾನಲ್ನಿಂದ ಲೈವ್ಸ್ಟ್ರೀಮ್ ಮಾಡಲು ಸಾಧ್ಯ. ಈ ಮೊದಲು ಈ ವಯಸ್ಸಿನ ಮಿತಿ 13 ವರ್ಷವಾಗಿತ್ತು. ಯೂಟ್ಯೂಬ್ ಹೊಸ ನಿಯಮದ ನಂತ್ರ 13 ರಿಂದ 15 ವರ್ಷದೊಳಗಿನ ಮಕ್ಕಳು ಯೂಟ್ಯೂಬ್ ಲೈವ್ಸ್ಟ್ರೀಮ್ ಮಾಡಲು ವಯಸ್ಕರ ಸಹಾಯ ಪಡೆಯಬೇಕಾಗುತ್ತದೆ.
ಯೂಟ್ಯೂಬ್ ನ ಮಾರ್ಗಸೂಚಿಗಳ ಪ್ರಕಾರ, 16 ವರ್ಷದೊಳಗಿನ ಯುಟ್ಯೂಬರ್ ಜೊತೆ ವಯಸ್ಕರು ಲೈವ್ಸ್ಟ್ರೀಮ್ ಮಾಡಲು ಸಿದ್ಧರಿದ್ದರೆ ಯಾವುದೇ ಅಡ್ಡಿಯಿಲ್ಲ. ಇಲ್ಲಿ ವಯಸ್ಕರೇ ಚಾನಲ್ನ ಸಂಪಾದಕ, ವ್ಯವಸ್ಥಾಪಕ ಅಥವಾ ಮಾಲೀಕರಾಗಿರಬೇಕು. ಅವರೇ ಯೂಟ್ಯೂಬ್ ಚಾನಲ್ನಿಂದ ಸ್ವತಃ ಲೈವ್ಸ್ಟ್ರೀಮ್ ಶುರು ಮಾಡ್ಬಹುದು. ಕಂಟೆಂಟನ್ನು ವೀಕ್ಷಕರ ಜೊತೆ ಹಂಚಿಕೊಳ್ಳಬಹುದು.