ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಸಿಮ್‌ಕಾರ್ಡ್ ಬಳಸಿ ವಂಚಿಸುವ ಪ್ರಕರಣಗಳನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಕ್ರಮ ತೆಗೆದುಕೊಂಡಿದೆ. ಅಲ್ಲದೆ ಸಿಮ್ ಕಾರ್ಡ್ ಖರೀದಿಗೆ ಹೊಸ ನಿಯಮಗಳನ್ನು ಪ್ರಕಟಿಸಿದ್ದು, ಡಿಸೆಂಬರ್ 1ರಿಂದ ಜಾರಿಯಾಗಲಿದೆ. ಸಿಮ್ ಕಾರ್ಡ್ ಖರೀದಿ ಮಾಡುವವರು ಈ ನಿಯಮಗಳನ್ನು ತಿಳಿದುಕೊಳ್ಳುವುದು ಅವಶ್ಯಕ.
ಹೊಸ ಸಿಮ್ ಕಾರ್ಡ್ ಖರೀದಿಗೆ ನಿಯಮಗಳು ಹೀಗಿವೆ
1. ವ್ಯಾಪಾರ ಮಾಡುವವರು ಮಾತ್ರ ಸಿಮ್ ಕಾರ್ಡ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಬಹುದು. ಸಾಮಾನ್ಯ ಬಳಕೆದಾರರು ಹಿಂದಿನಂತೆ ಈಗಲೂ ಕೂಡ ಒಂದು ಐಡಿಯಲ್ಲಿ 9 ಸಿಮ್ ಕಾರ್ಡ್‌ಗಳನ್ನು ಪಡೆಯಬಹುದು.
2. ಸಿಮ್ ಕಾರ್ಡ್ ಅನ್ನು ಕ್ಲೋಸ್ ಆದ 90 ದಿನಗಳ ಅವಧಿಯ ನಂತರವೇ ಆ ಸಂಖ್ಯೆಯನ್ನು ಇನ್ನೊಬ್ಬ ವ್ಯಕ್ತಿಗೆ ನೀಡಲಾಗುವುದು.
3. ಅಸ್ತಿತ್ವದಲ್ಲಿರುವ ತಮ್ಮ ಫೋನ್ ಸಂಖ್ಯೆಗಳಿಗೆ ಸಿಮ್ ಕಾರ್ಡ್‌ಗಳನ್ನು ಖರೀದಿಸುವ ಗ್ರಾಹಕರು ತಮ್ಮ ಆಧಾರ್ ಮತ್ತು ಬಯೋಮೆಟ್ರಿಕ್ ಸಲ್ಲಿಸುವುದು ಕಡ್ಡಾಯ.
4. ರಿಜಿಸ್ಟರ್ ಆಗದ ಡೀಲರ್‌ಗಳ ಮೂಲಕ ಸಿಮ್ ಕಾರ್ಡ್‌ಗಳ ಮಾರಾಟ ಮಾಡಿಸಿದರೆ ಟೆಲಿಕಾಂ ಆಪರೇಟರ್‌ಗಳ ಮೇಲೆ 10 ಲಕ್ಷ ರೂ. ದಂಡ ಬೀಳಲಿದೆ.
5. ರಿಜಿಸ್ಟರ್ ಆಗದ ಡೀಲರ್‌ಗಳ ಮೂಲಕ ಪಡೆದ ಸಿಮ್ ಕಾರ್ಡ್ ಹಾಗೂ ಫೋನ್ ನಂಬರ್ಗಳನ್ನು ಮರುಪರಿಶೀಲನೆ ಮಾಡಲಾಗುತ್ತದೆ.