ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೊಂದು ದೇಶದಲ್ಲಿ ಒಂದೊಂದು ಸಮಯದಲ್ಲಿ ಒಂದೊಂದು ವಿಷಯ ಟ್ರೆಂಡಿಂಗ್ ಆಗಿರುತ್ತದೆ. ಕೆಲವು ಮಾತ್ರ ದೀರ್ಘಕಾಲ ಟ್ರೆಂಡ್ ಆಗಿಯೇ ಉಳಿಯುತ್ತವೆ. ಅಂಥದ್ದೇ ಒಂದು ಟ್ರೆಂಡ್ ಇದೀಗ ಆಸ್ಟ್ರೇಲಿಯಾದಲ್ಲಿ ಆರಂಭವಾಗಿದೆ.
ಬರಿಗಾಲಿನಲ್ಲಿ ನಡೆಯುವುದರ ಲಾಭಗಳ ಮಹತ್ವ ಅರಿತ ಆಸ್ಟ್ರೇಲಿಯಾದ ಜನರು ಇದೀಗ ಎಲ್ಲೆಡೆ ಬರಿಗಾಲಿನಲ್ಲಿ ನಡೆಯಲು ಶುರು ಮಾಡಿದ್ದಾರೆ. ಈ ಹೊಸ ಟ್ರೆಂಡ್ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬೀದಿಗಳಲ್ಲಿ ಜನರು ಬರಿಗಾಲಿನಲ್ಲಿ ತಿರುಗಾಡುತ್ತಿರುವುದನ್ನು ಕಾಣಬಹುದು. ಪಾರ್ಟಿ, ಮಾಲ್, ಶಾಪಿಂಗ್ ಜೊತೆಗೆ ಆಫೀಸ್ ಗೆ ಹೋಗುವಾಗಲು ಕೂಡಾ ಇಲ್ಲಿನ ಜನರು ಚಪ್ಪಲಿ ಧರಿಸುವುದಿಲ್ಲ. ಇತ್ತೀಚಿಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ದೇಶಗಳಲ್ಲಿ ಈ ಟ್ರೆಂಡ್ ಪ್ರಖ್ಯಾತಿಯನ್ನು ಪಡೆಯುತ್ತಿದೆ.
🇦🇺 Is this a normal thing in Australia? pic.twitter.com/hxFVL0ufiP
— Censored Men (@CensoredMen) May 13, 2024