ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಯಾಗಿ ಕೆಲವೇ ದಿನಗಳಲ್ಲಿ ಉದ್ಭವಿಸಿದ ದಾಂಪತ್ಯ ಕಲಹ ಇದೀಗ ಕಾನೂನು ಹೋರಾಟದ ಹಂತ ತಲುಪಿದೆ. ಬೆಂಗಳೂರಿನ ವಿಲ್ಸನ್ ಗಾರ್ಡನ್ ವ್ಯಾಪ್ತಿಯಲ್ಲಿ ಪತ್ನಿ ಮೇಘಶ್ರೀ ಪತಿ ವಿರುದ್ಧ ಗಂಭೀರ ಆರೋಪಗಳೊಂದಿಗೆ ಕೇಂದ್ರ ಮಹಿಳಾ ಠಾಣೆಗೆ ದೂರು ನೀಡಿದ್ದ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಪತಿ ಮಂಜುನಾಥ್ ಪತ್ನಿಯ ಆರೋಪಗಳನ್ನು ತಳ್ಳಿ ಹಾಕಿ, ಅವು ಸುಳ್ಳು ಎಂದು ಹೇಳುತ್ತಾ ಪ್ರತಿದೂರು ನೀಡಲು ಮುಂದಾಗಿದ್ದಾರೆ.
ಮಂಜುನಾಥ್ ಆರೋಪದಂತೆ, ಮೇಘಶ್ರೀ 30 ಲಕ್ಷ ರೂ. ಹಣ ಮತ್ತು 50 ಗ್ರಾಂ ಚಿನ್ನಕ್ಕಾಗಿ ತನ್ನನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ. ಮೇಘಶ್ರೀಗೆ ಈ ಹಿಂದೆ ಎರಡು ಮದುವೆಗಳಾಗಿ ವಿಚ್ಛೇದನ ಆಗಿರುವುದಾಗಿ ಹೇಳಿರುವ ಅವರು, ಮೂರನೇ ಮದುವೆಯಾದ ಮೂರು ತಿಂಗಳಲ್ಲೇ ತನ್ನ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಆರೋಪಿಸಿದ್ದಾರೆ. ಒಂದೇ ಕಂಪನಿಯಲ್ಲಿ ಕೆಲಸ ಮಾಡುವಾಗ ಪರಿಚಯವಾಗಿ ಮದುವೆಯಾದರೂ, ಪತ್ನಿ ದುಬಾರಿ ವಸ್ತುಗಳು ಹಾಗೂ ಹಣ ಪಡೆದು ಕಿರುಕುಳ ನೀಡುತ್ತಿದ್ದಾಳೆ ಎಂದು ದೂರಿದ್ದಾರೆ.
ಇದನ್ನೂ ಓದಿ: Kitchen tips | ಹಿತ್ತಾಳೆ ಪಾತ್ರೆಯ ಜಿಡ್ಡು ತೆಗೆಯುವುದು ಹೇಗೆ? ಇಲ್ಲಿದೆ ಸಿಂಪಲ್ ಟ್ರಿಕ್ಸ್!
ಇತ್ತ, ಪತಿಯ ಆರೋಪಗಳಿಗೆ ಪ್ರತಿಕ್ರಿಯಿಸಿದ ಮೇಘಶ್ರೀ, ನಾನು ಮಂಜುನಾಥ್‌ನಿಂದ ಹಣ ಅಥವಾ ಚಿನ್ನ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತನ್ನ ಹಿಂದಿನ ವಿಚ್ಛೇದನಗಳ ಬಗ್ಗೆ ಪತಿಗೆ ಪೂರ್ವದಲ್ಲೇ ತಿಳಿದಿತ್ತು ಎಂದ ಅವರು, ಮದುವೆಯ ನಂತರ ಪತಿಯ ವರ್ತನೆ ಬದಲಾಗಿದ್ದು, ಬೇರೊಬ್ಬರೊಂದಿಗೆ ಸಂಬಂಧ ಬೆಳೆಸುವಂತೆ ಒತ್ತಾಯಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣ ಇದೀಗ ಪರಸ್ಪರ ದೂರುಗಳೊಂದಿಗೆ ತನಿಖೆಯ ಹಂತದಲ್ಲಿದೆ.

