ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂದಾಜು 1200ರೂ. ಕೋಟಿ ಕಲೆಕ್ಷನ್ ಮತ್ತು ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದ ತೆಲುಗು ಚಿತ್ರ ‘RRR’. ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ ಸಂಗ್ರಹಗಳಲ್ಲಿ ದಾಖಲೆಗಳ ಪುಟ ತೆರೆದಿದ್ದಾರೆ. RRR ಚಿತ್ರದ ‘ನಾಟು ನಾಟು’ ಹಾಡಿಗೆ ಪ್ರತಿಷ್ಠಿತ ಪ್ರಶಸ್ತಿ ಆಸ್ಕರ್ ಪ್ರಶಸ್ತಿಯೂ ಸಿಕ್ಕಿದೆ. ಈ ಅಪರೂಪದ ಕ್ಷಣಗಳನ್ನು ತೆಲುಗು ಅಭಿಮಾನಿಗಳು ಈಗಲೂ ಆನಂದಿಸುತ್ತಿದ್ದಾರೆ.
ಆರ್‌ಆರ್‌ಆರ್‌ನ ಸೀಕ್ವೆಲ್ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಗಳಿವೆ. ಇತ್ತೀಚೆಗಷ್ಟೇ ಬರಹಗಾರ ವಿಜಯೇಂದ್ರ ಪ್ರಸಾದ್ ಸೀಕ್ವೆಲ್ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ.
ವಿಜಯೇಂದ್ರ ಪ್ರಸಾದ್ ಇತ್ತೀಚೆಗೆ ಈ ಚಿತ್ರದ ಬಗ್ಗೆ ಒಂದು ಅಪ್ಡೇಟ್ ಅನ್ನು ಹಂಚಿಕೊಂಡಿದ್ದಾರೆ. “ಆರ್‌ಆರ್‌ಆರ್ ಸೀಕ್ವೆಲ್ ಹಾಲಿವುಡ್ ಗುಣಮಟ್ಟದಲ್ಲಿ ಇರಲಿದೆ ಎಂದರು. ಇದು ಹಾಲಿವುಡ್ ಗುಣಮಟ್ಟದಲ್ಲಿ ಇರಲಿದ್ದು, ಈ ಚಿತ್ರವನ್ನು ರಾಜಮೌಳಿ ಅಥವಾ ಅವರ ಮೇಲ್ವಿಚಾರಣೆಯಲ್ಲಿ ಯಾರಾದರೂ ನಿರ್ದೇಶಿಸಲಿದ್ದಾರೆ” ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ. ಈ ಹೇಳಿಕೆ ಸಿನಿ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ. ರಾಜಮೌಳಿ ಬದಲು ಬೇರೆ ಯಾರೂ ನಿರ್ದೇಶಿದರೂ ಸಿನಿಮಾಗೆ ಅಷ್ಟು ಕ್ರೇಜ್ ಇರಲ್ಲ ಅನ್ನೋದು ಅಭಿಮಾನಿಗಳ ಅಭಿಪ್ರಾಯ.