ಕೋವಿಡ್ ನಡುವಲ್ಲೇ ಹೊಸವರ್ಷಾಚರಣೆ: ಕಾಸರಗೋಡು ಜಿಲ್ಲೆಯಲ್ಲಿದೆ ಖಾಕಿ ಹದ್ದಿಕಣ್ಣು!

ಹೊಸದಿಂತ ಡಿಜಿಟಲ್ ಡೆಸ್ಕ್:
ಒಂದೆಡೆ ಕೋವಿಡ್ ಪ್ರಕರಣಗಳ ಹೆಚ್ಚಳ, ಇನ್ನೊಂದೆಡೆ ಕಾನೂನು ಸುವ್ಯವಸ್ಥೆ ಪಾಲನೆ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾಡಳಿತ ಅಲರ್ಟ್ ಆಗಿದ್ದು, ಹೊಸವರ್ಷಾಚರಣೆ ಸಂಭ್ರಮದ ಮೇಲೆ ಹದ್ದಿನಕಣ್ಣಿರಿಸಿದೆ.
ಜಿಲ್ಲೆಯ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಜನನಿಬಿಡ ಸ್ಥಳಗಳ ಮೇಲೆ ಹದ್ದಿನಕಣ್ಣಿರಿಸಿರುವ ಪೊಲೀಸರು ಎಲ್ಲಾ ಚಲನವಲನಗಳ ಮೇಲೆ ನಿಗಾ ಇರಿಸಿದ್ದಾರೆ.
ಇನ್ನು ವಸತಿಗೃಹಗಳ ಮೇಲೂ ಹದ್ದಿಕಣ್ಣಿರಿಸಲಾಗಿದ್ದು, ಕೊಠಡಿ ಪಡೆದವರ ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ. ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕಾನೂನು ಭಂಜಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಇತರ ರಾಜ್ಯಗಳಿಂದ ಜಿಲ್ಲೆಯೊಳಕ್ಕೆ ಮಾದಕ ವಸ್ತು, ಮದ್ಯಸಾಗಾಟಗಳು ನಡೆಯದಂತೆ ಪೊಲೀಸರು, ಅಬಕಾರಿ ದಳ ಜಂಟಿ ಕಾರ್ಯಾಚರಣೆ ಕೈಗೊಂಡಿದೆ.
ಗಡಿ ಪ್ರದೇಶಗಳಲ್ಲಿ ವಾಹನ ತಪಾಸಣೆ ಚುರುಕುಗೊಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!