ಹೊಸ ವರ್ಷಾಚರಣೆ: ಅಯೋಧ್ಯೆ ಸೇರಿ ಪ್ರಮುಖ ದೇಗುಲಗಳಲ್ಲಿ ವಿಶೇಷ ಪೂಜೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಆಂಗ್ಲ ಕ್ಯಾಲೆಂಡರ್ ಪ್ರಕಾರ ಇಂದು ಹೊಸ ವರ್ಷ ಆರಂಭವಾಗಿದೆ. 2025ನೇ ಇಸವಿಯನ್ನು ದೇಶಾದ್ಯಂತ ಜನರು ಬೆಳಗ್ಗೆಯಿಂದಲೇ ದೇವಸ್ಥಾನಗಳಿಗೆ ಹೋಗಿ ಪೂಜೆ-ಪುನಸ್ಕಾರಗಳ ಮೂಲಕ ಬರಮಾಡಿಕೊಳ್ಳುತ್ತಿದ್ದಾರೆ.

ದೇಶಾದ್ಯಂತ ಹೊಸ ವರ್ಷದ ಸಂಭ್ರಮಾಚರಣೆ ಕಳೆಗಟ್ಟಿದ್ದು, ನೂತನ ವರ್ಷವನ್ನು ಭಾರತೀಯರು ಅತ್ಯಂತ ಸಂಭ್ರಮದಿಂಧ ಬರಮಾಡಿಕೊಂಡಿದ್ದಾರೆ. ದೇಶದ ಪ್ರಮುಖ ನಗರಗಳಲ್ಲಿ ನಡೆದ ತಡರಾತ್ರಿ ಸಂಭ್ರಮಾಚರಣೆಗಳು, ಹೊಸ ವರ್ಷದ ಹುಮ್ಸಸ್ಸನ್ನು ಇಮ್ಮಡಿಗೊಳಿಸಿದವು.

2025ರ ಮೊದಲ ದಿನದ ಮುಂಜಾವು ಜನರು ಆಧ್ಯಾತ್ಮ ಕಡೆಗೆ ಹೆಚ್ಚು ಒಲವು ತೋರಿಸುತ್ತಿರುವಂತೆ ಕಂಡುಬರುತ್ತಿದೆ. ದೇಶದ ವಿವಿಧ ಭಾಗಗಳಲ್ಲಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಗಿದೆ. ಇಂದು ನಸುಕಿನ ಜಾವವೇ ಎದ್ದು ಮನೆಯನ್ನು ಶುಚಿರ್ಭೂತಗೊಳಿಸಿ ದೇವರ ಮನೆಯನ್ನು ಸ್ವಚ್ಛಗೊಳಿಸಿ ಸ್ನಾನ ಮಾಡಿ ಹೊಸ ವರ್ಷದ ದಿನ ಪ್ರಕೃತಿಯಲ್ಲಿ ಸೂರ್ಯೋದಯವನ್ನು ಹಲವರು ತಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿದುಕೊಳ್ಳುತ್ತಿದ್ದಾರೆ.

ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಕಳೆದ ಜನವರಿ ತಿಂಗಳಲ್ಲಿ ದೇಗುಲ ಉದ್ಘಾಟನೆಗೊಂಡಿದ್ದು ಇಂದು ಬೆಳ್ಳಂಬೆಳಗ್ಗೆಯೇ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಅಯೋಧ್ಯೆಗೆ ಹೋಗಿ ರಾಮನ ದರ್ಶನ ಪಡೆಯುತ್ತಿದ್ದಾರೆ. ಅಯೋಧ್ಯೆಯ ಸರಯೂ ನದಿ ತೀರದಲ್ಲಿ ಭಕ್ತರು ಗಂಗಾ ಮಾತೆ ಮತ್ತು ಸೂರ್ಯನಿಗೆ ದೀಪ ಬೆಳಗುವುದು ಕಂಡುಬಂತು. ಅದೇ ರೀತಿ ಪಂಜಾಬ್‌ನಲ್ಲಿರುವ ಅಮೃತ್‌ಸರ್‌ ಸ್ವರ್ಣಮಂದಿರದಲ್ಲೂ ಭಕ್ತರ ದಂಡು ಕಂಡುಬಂದಿತು. ಬೆಳಗ್ಗೆ ಕುಟುಂಬ ಸಮೇತ ಮಂದಿರಕ್ಕೆ ಆಗಮಿಸಿದ ಭಕ್ತರು, ಹೊಸ ವರ್ಷವನ್ನು ಸ್ವಾಗತಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!