ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಸ್ ಮಸ್, ಹೊಸ ವರ್ಷದ ಸಾಲು ಸಾಲು ರಜೆ ಹಿನ್ನೆಲೆ ಶ್ರೀ ರಾಘವೇಂದ್ರಸ್ವಾಮಿ ಮಠ, ಮಂತ್ರಾಲಯ ಭಕ್ತರಿಂದ ತುಂಬಿ ತುಳುಕುತ್ತಿದೆ. ಮಂತ್ರಾಲಯದಲ್ಲಿ ಭಕ್ತರ ಸಂಖ್ಯೆ ಅಗಾಧವಾಗಿ ಹೆಚ್ಚುತ್ತಿದೆ.
ರಾಯರ ಸನ್ನಿಧಿ ಎಂದೇ ಪ್ರಸಿದ್ಧವಾಗಿರುವ ರಾಯರ ಮಠದ ಮಂತ್ರಾಲಯದಲ್ಲಿ ಪ್ರತಿದಿನ ರಾಯರ ವಿವಿಧ ಸೇವೆಗಳನ್ನು ಆಯೋಜಿಸಲಾಗಿದೆ. ಡಿಸೆಂಬರ್ 25 ರಿಂದ ಭಕ್ತರ ಸಂಖ್ಯೆ ಹೆಚ್ಚಿದ್ದು, ಜನವರಿ 2 ರವರೆಗೆ ಮುಂದುವರೆಯಲಿದೆ ಎಂದು ಶ್ರೀಮಠ ತಿಳಿಸಿದೆ.
ಮಠದ ರೂಂಗಳಿಗೆ ಆನ್ಲೈನ್ ಬುಕಿಂಗ್ ಬಂದ್ ಮಾಡಲಾಗಿದ್ದು, ಆಫ್ಲೈನ್ ಬುಕಿಂಗ್ಗೆ ಅವಕಾಶ ಕಲ್ಪಿಸಲಾಗಿದೆ. ಮಂತ್ರಾಲಯದಲ್ಲಿ ಎಲ್ಲಿ ನೋಡಿದರಲ್ಲಿ ಭಕ್ತಸಾಗರವೇ ಹರಿದುಬರುತ್ತಿದೆ.