ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಲಿಕಲ್ಲು ಮಳೆಯಿಂದಾಗಿ ನ್ಯೂಯಾರ್ಕ್‌ಗೆ ತೆರಳುವ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಬೇಕಾಯಿತು. ವಿಮಾನ ಟೇಕ್ ಆಫ್ ಆದ ನಂತರ ಆಲಿಕಲ್ಲು ಮಳೆಯಿಂದಾಗಿ ವಿಮಾನದ ರೆಕ್ಕೆಗಳು, ಇಂಜಿನ್ ಮತ್ತು ಫ್ಯೂಸ್ ಹಾನಿಯಾಗಿದೆ.
ಮಿಲನ್‌ನಿಂದ ನ್ಯೂಯಾರ್ಕ್ ನಗರಕ್ಕೆ ಹೊರಟಿದ್ದ ಡೆಲ್ಟಾ ಏರ್ ಲೈನ್ಸ್ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ಭಾರೀ ಆಲಿಕಲ್ಲು ಮಳೆಯಿಂದಾಗಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಆಲಿಕಲ್ಲು ಮಳೆಯಿಂದಾಗಿ ವಿಮಾನದ ಮುಂಭಾಗಕ್ಕೆ ದೊಡ್ಡ ರಂಧ್ರಗಳು ಬಿದ್ದಿವೆ. ವಿಮಾನದಲ್ಲಿ 215 ಪ್ರಯಾಣಿಕರು, ಮೂವರು ಪೈಲಟ್‌ಗಳು ಮತ್ತು 8 ಫ್ಲೈಟ್ ಅಟೆಂಡೆಂಟ್‌ಗಳಿದ್ದರು. ವಿಮಾನ ಟೇಕ್ ಆಫ್ ಆದ 15 ನಿಮಿಷಗಳ ನಂತರ ರೋಲರ್ ಕೋಸ್ಟರ್ ರೈಡ್ ಅನಿಸಿತು ಎಂದು ಪ್ರಯಾಣಿಕರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆಲಿಕಲ್ಲು ಮಳೆಯಿಂದ ವಿಮಾನದ ರೆಕ್ಕೆಗಳು ಹಾನಿಗೀಡಾಗಿರುವುದನ್ನು ನೋಡಿರುವುದಾಗಿ ಪ್ರಯಾಣಿಕರೊಬ್ಬರು ಹೇಳಿದ್ದಾರೆ. ವಿಮಾನದ ಇಂಜಿನ್ ರಂಧ್ರದಿಂದ ಹಾನಿಯಾಗಿದೆ. ಆಲಿಕಲ್ಲು ಮಳೆಯಿದ್ದರೂ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡುವಲ್ಲಿ ಪೈಲೆಟ್ ಯಶಸ್ವಿಯಾದರು. ಡೆಲ್ಟಾ ಏರ್ ಲೈನ್ಸ್ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ಕ್ಷಮೆಯಾಚಿಸಿದೆ.