ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯೂಝಿಲೆಂಡ್ ವೇಗಿ ಜಾರ್ಜ್ ವರ್ಕರ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2015ರಲ್ಲಿ ಕಿವೀಸ್‌ಗೆ ಪದಾರ್ಪಣೆ ಮಾಡಿದ್ದ ವಾರ್ಕರ್ ಈಗ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡು ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.
“ವೃತ್ತಿಪರ ಕ್ರಿಕೆಟ್‌ನಲ್ಲಿ 17 ವರ್ಷಗಳ ಸುದೀರ್ಘ ಪ್ರಯಾಣದ ನಂತರ, ನಾನು ಕ್ರೀಡೆಯಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ಈ ನಿರ್ಧಾರವು ನನ್ನ ಜೀವನದಲ್ಲಿ ನಂಬಲಾಗದ ಅಧ್ಯಾಯದ ಅಂತ್ಯವನ್ನು ಸೂಚಿಸುತ್ತದೆ ಮತ್ತು ಹೊಸ ಸಾಹಸದ ಆರಂಭವನ್ನು ಸೂಚಿಸುತ್ತದೆ, ”ಎಂದು ಹೇಳಿದ್ದಾರೆ. ಹೀಗಾಗಿ, ನ್ಯೂಝಿಲೆಂಡ್ ಎಡಗೈ ಬ್ಯಾಟ್ಸ್‌ಮನ್ ತಮ್ಮ ಸುದೀರ್ಘ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.
ಜಾರ್ಜ್ ವರ್ಕರ್ ನ್ಯೂಝಿಲೆಂಡ್ ಪರ 10 ODI ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಮೂರು ಅರ್ಧಶತಕ ಸೇರಿದಂತೆ ಒಟ್ಟು 272 ರನ್ ಗಳಿಸಿದರು. ಎರಡು ಟಿ20 ಪಂದ್ಯಗಳನ್ನು ಆಡಿದ ವರ್ಕರ್ ಅರ್ಧಶತಕದೊಂದಿಗೆ 90 ರನ್ ಗಳಿಸಿದರು. ಆದರೆ, ಅವರಿಗೆ ನ್ಯೂಝಿಲೆಂಡ್ ತಂಡದಲ್ಲಿ ಖಾಯಂ ಸ್ಥಾನ ನೀಡಿಲ್ಲ.