February 24, 2026
Tuesday, February 24, 2026
spot_img

SHOCKING | ಮದುವೆಯಾದ ಎರಡೇ ದಿನಕ್ಕೆ ನವವಧು ಡೆತ್‌! ವರದಕ್ಷಿಣೆ ಕೇಸ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಮದುವೆಯಾದ ಎರಡೇ ದಿನಕ್ಕೆ ಯುವತಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ.

ಪಿಪಿ ಗಂಜ್‌ ಪ್ರದೇಶದಲ್ಲಿ ಘಟನೆ ನಡೆದಿದೆ. ಮದುವೆಯ ಚಪ್ಪರವೇ ಇನ್ನೂ ತೆಗೆದಿರಲಿಲ್ಲ, ಕೈಯಲ್ಲಿ ಮದರಂಗಿ ಮಾಸಿರಲಿಲ್ಲ. ಎರಡೇ ದಿನದಲ್ಲಿ ನವವಧು ಮೃತಪಟ್ಟಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

21 ವರ್ಷದ ಸೀಮಾ ಮೃತರು. ಸೀಮಾ ಮನೋಜ್‌ ಎನ್ನುವ ಯುವಕನನ್ನು ವರಿಸಿದ್ದರು. ಅತ್ತೆಯ ಮನೆಗೆ ಹೋದ ಮರುದಿನವೇ ನಿಮ್ಮ ಮಗಳ ಆರೋಗ್ಯ ಹದಗೆಟ್ಟಿದೆ ಎಂದು ತವರು ಮನೆಗೆ ಕರೆ ಬಂದಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಸೀಮಾಳ ಪೋಷಕರು ಆಸ್ಪತ್ರೆಗೆ ಬರುವ ಮುನ್ನವೇ ಮೃತದೇಹವನ್ನು ಹಾಗೇ ಬಿಟ್ಟು ಗಂಡನ ಮನೆ ಕಡೆಯವರು ಪರಾರಿಯಾಗಿದ್ದಾರೆ. ನನ್ನ ಮಗಳಿಗೆ ಯಾವ ಆರೋಗ್ಯ ಸಮಸ್ಯೆಯೂ ಇರಲಿಲ್ಲ. ವರದಕ್ಷಿಣೆಗಾಗಿ ಹಿಂಸೆ ನೀಡಿ ಕೊಂದಿದ್ದಾರೆ ಎಂದು ಸೀಮಾ ಪೋಷಕರು ಆರೋಪಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !