ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ನಾಗಚೈತನ್ಯ ಹಾಗೂ ಸೋಭಿತಾ ಧುಲಿಪಾಲ ನಿಶ್ಚಿತಾರ್ಥ ಇಂದು ಅದ್ಧೂರಿಯಾಗಿ ನಡೆದಿದೆ.
ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ಪ್ರೀತಿಯಲ್ಲಿ ಇರೋ ವಿಚಾರ ಈಗ ಅಧಿಕೃತ ಆಗಿದೆ. ಇಬ್ಬರೂ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಈ ಸಂದರ್ಭದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಾಗ ಚೈತನ್ಯ ಅವರ ನಿವಾಸದಲ್ಲೇ ನಿಶ್ಚಿತಾರ್ಥ ನಡೆದಿದೆ. ಈ ಬಗ್ಗೆ ಈವರೆಗೂ ಸಮಂತಾ ಯಾವುದೇ ರಿಯಾಕ್ಷನ್ ನೀಡಿಲ್ಲ. ಸಮಂತಾ ಹಾಗೂ ನಾಗಚೈತನ್ಯ ಒಂದಾಗ್ತಾರೆ ಎಂದು ಕಾದಿದ್ದ ಫ್ಯಾನ್ಸ್‌ಗೆ ಮಾತ್ರ ನಿರಾಸೆಯಾಗಿದೆ.