ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಏಕಕಾಲಕ್ಕೆ ನಾಲ್ಕು ರಾಜ್ಯಗಳಲ್ಲಿ ಎನ್ಐಎ ದಾಳಿ ನಡೆದಿದ್ದು, ಎಂಟು ಶಂಕಿತ ಐಸಿಸ್ ಉಗ್ರರನ್ನು ಬಂಧಿಸಲಾಗಿದೆ.
ಐಸಿಸ್ನ ಬಳ್ಳಾರಿ ಮಾಡ್ಯೂಲ್ ದಾಳಿಯ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದ್ದು, ಒಟ್ಟಾರೆ ೧೯ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.
ಅಮರಾವತಿ, ಮುಂಬೈ, ಪುಣೆ, ಜಾರ್ಖಂಡ್, ದೆಹಲಿ ಹಾಗೂ ಕರ್ನಾಟಕದಲ್ಲಿ ದಾಳಿ ನಡೆಸಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿದ್ದ ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಸಲ್ಫರ್, ಪೊಟ್ಯಾಶಿಯಂ, ನೈಟ್ರೇಟ್, ಕಲ್ಲಿದ್ದಲು, ಗನ್ ಪೌಡರ್, ಸಕ್ಕರೆ ಹಾಗೂ ಎಥನಾಲ್ ವಶಕ್ಕೆ ಪಡೆದಿದ್ದಾರೆ. ಹರಿತವಾದ ಆಯುಧಗಳು, ಸಾಕಷ್ಟು ಸ್ಮಾರ್ಟ್ ಫೋನ್ಗಳು ಹಾಗೂ ನಗದು ವಶಕ್ಕೆ ಪಡೆಯಲಾಗಿದೆ.