ಕರ್ನಾಟಕ ಸಹಿತ ನಾಲ್ಕು ರಾಜ್ಯಗಳಲ್ಲಿ ಏಕಕಾಲಕ್ಕೆ NIA ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ರಾಷ್ಟ್ರೀಯ ತನಿಖಾ ದಳ ಇಂದು ಕರ್ನಾಟಕ ಸೇರಿದಂತೆ ದೇಶದ ನಾಲ್ಕು ರಾಜ್ಯಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದು, ಉಗ್ರ ಸಂಘಟನೆಗಳ ಚಟುವಟಿಕೆಗೆ ಬಳಕೆ ಮಾಡುತ್ತಿದ್ದ ಡಿಜಿಟಲ್‌ ಉಪಕರಣಗಳು ಹಾಗೂ ಪ್ರಚೋದನಕಾರಿ ವಸ್ತುಗಳನ್ನು ತಪಾಸಣೆ ವೇಳೆ ವಶಕ್ಕೆ ಪಡೆದಿದೆ.

ಅಲ್‌ ಖೈದಾ ಹಾಗೂ ತೆಹ್ರಿಕ್ – ಇ – ತಾಲಿಬಾನ್ ಸಂಘಟನೆಗಳು ಭಾರತದಲ್ಲಿ ಭಯೋತ್ಪಾದಕ ಜಾಲ ವಿಸ್ತರಿಸಲು ನಡೆಸಿದ್ದ ಸಂಚನ್ನು ನಿಷ್ಕ್ರಿಯಗೊಳಿಸಿದೆ.

ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ಉಗ್ರ ಸಂಘಟನೆ ತೆಹ್ರಿಕ್ – ಇ – ತಾಲಿಬಾನ್ ಭಾರತ ಉಪಖಂಡದಲ್ಲೂ ತನ್ನ ಕರಾಳ ಹಸ್ತ ಚಾಚುತ್ತಿದೆ. ತನ್ನ ಸಂಘಟನೆಗೆ ಭಾರತೀಯ ಯುವಕರನ್ನು ಸೆಳೆದು ಅವರಲ್ಲಿ ಧರ್ಮಾಂದತೆ ತುಂಬುವ ಕೃತ್ಯಗಳನ್ನು ಎನ್‌ಐಎ ಬಯಲು ಮಾಡಿದೆ.

ಕರ್ನಾಟಕ ಮಾತ್ರವಲ್ಲ, ಮಹಾರಾಷ್ಟ್ರ, ಗುಜರಾತ್ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಹಲವೆಡೆ ಎನ್‌ಐಎ ತಂಡ ಏಕಕಾಲಕ್ಕೆ ದಾಳಿ ನಡೆಸಿ ಹಲವು ಪ್ರಚೋದನಕಾರಿ ವಸ್ತುಗಳನ್ನು ವಶಕ್ಕೆ ಪಡೆದಿದೆ.

ಮಹಾರಾಷ್ಟ್ರದ ಮೂರು ಸ್ಥಳಗಳಲ್ಲಿ ಎನ್‌ಐಎ ತಂಡ ದಾಳಿ ನಡೆಸಿದೆ. ಇನ್ನುಳಿದಂತೆ ಕರ್ನಾಟಕ, ಗುಜರಾತ್ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ತಲಾ ಒಂದು ಸ್ಥಳದಲ್ಲಿ ದಾಳಿ ನಡೆಸಿದ್ದೇವೆ ಎಂದು ಎನ್‌ಐಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಚೋದನಕಾರಿ ಅಂಶಗಳನ್ನು ಹೊಂದಿದ್ದ ಡಿಜಿಟಲ್ ಉಪಕರಣಗಳನ್ನು ಈ ವೇಳೆ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!