ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ನ ಅಹಮದಾಬಾದ್ನ ಮೆಹ್ಸಾನ್ನಲ್ಲಿ ಈಗಷ್ಟೇ ಜನಿಸಿದ ಮಗುವಿನಲ್ಲಿ ಭಯಬೀಳಿಸುವಷ್ಟು ನಿಕೋಟಿನ್ ಅಂಶ ಪತ್ತೆಯಾಗಿದೆ.
ಸಿಸೇರಿಯನ್ ಮೂಲಕ ಹೆರಿಗೆ ನಡೆದಿದ್ದು, ಹುಟ್ಟಿದ ಮಗು ಅಳಲಿಲ್ಲ ಜೊತೆಗೆ ಮಗು ನೀಲಿ ಬಣ್ಣದಲ್ಲಿತ್ತು. ಹುಟ್ಟಿದ ಕೆಲ ಸಮಯದಲ್ಲಿಯೇ ಮಗುವಿನ ಆರೋಗ್ಯ ಕ್ಷೀಣಿಸಿದ್ದು, ತಕ್ಷಣ ವೈದ್ಯರು ಇನ್ಕ್ಯುಬೇಟರ್ನಲ್ಲಿ ಮಗುವನ್ನು ಇಟ್ಟು ಚಿಕಿತ್ಸೆ ನೀಡಿದ್ದಾರೆ.
ಮಗುವಿನಲ್ಲಿ 3000 ದಷ್ಟು ನಿಕೋಟಿನ್ ಅಂಶ ಪತ್ತೆಯಾಗಿದೆ, ಇದು ವಯಸ್ಕರಿಗಿಂತ ಅಪಾಯಕಾರಿ ಮಟ್ಟವಾಗಿದೆ, ಮಗು ಉಸಿರುಗಟ್ಟಿ ನೀಲಿ ಬಣ್ಣಕ್ಕೆ ತಿರುಗಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಪೋಷಕರ ಜೊತೆ ಮಾತನಾಡಿದಾಗ ಅವರಿಬ್ಬರು ತಂಬಾಕು ವ್ಯಸನಿಗಳು ಎಂದು ತಿಳಿದುಬಂದಿದೆ. ಗರ್ಭಿಣಿಯಾದಾಗಲೂ ತಾಯಿ ತಂಬಾಕು ಸೇವನೆ ಮಾಡಿದ್ದಾಳೆ, ಮಗುವಿನ ತಂದೆಗೂ ಈ ಅಭ್ಯಾಸ ಇದ್ದು, ಮಗುವಿನ ಮೇಲೆ ಪರಿಣಾಮ ಬೀರಿದೆ.