ಹೊಸದಿಗಂತ ಡಿಜಿಟಲ್ ಡೆಸ್ಕ್:
ನೈಜರ್ ನದಿಯಲ್ಲಿ ದೋಣಿ ಮುಳುಗಿ ನೂರಾರು ಜನ ಸಾವನ್ನಪ್ಪಿರುವ ಘಟನೆ ನೈಜೀರಿಯಾದಲ್ಲಿ ನಡೆದಿದೆ. ಮದುವೆ ಅತಿಥಿಗಳು ಸೇರಿದಂತೆ ಸುಮಾರು 300 ಜನರನ್ನು ಹೊತ್ತೊಯ್ತಿದ್ದ ಬೋಟ್ ಮರದ ಕಾಂಡಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು CNN ವರದಿ ಮಾಡಿದೆ.
ಹತ್ತಿರದ ಹಳ್ಳಿಯಲ್ಲಿ ಮದುವೆ ಸಮಾರಂಭವಿದ್ದು, ಸಮಾರಂಭದ ನಂತರ ಮಳೆ ಸುರಿಯಲಾರಂಭಿಸಿತು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಭಾರೀ ಮಳೆಯಿಂದಾಗಿ ದ್ವಿಚಕ್ರವಾಹನವನ್ನು ಓಡಿಸಲು ಸಾಧ್ಯವಾಗದ ಕಾರಣ ಮದುವೆಯಲ್ಲಿ ಭಾಗವಹಿಸಿದ ಜನರು ಎಗ್ಬೋಟಿ ಗ್ರಾಮದಿಂದ ಜನರನ್ನು ಸ್ಥಳಾಂತರಿಸಲು ದೋಣಿ ಬಳಸಲು ನಿರ್ಧರಿಸಿದರು.
ದೋಣಿಯಲ್ಲಿ ಸುಮಾರು 300 ಜನರು ಪ್ರಯಾಣಿಸುತ್ತಿದ್ದು, ಇದರಲ್ಲಿ ವಿವಿಧ ಸಮುದಾಯಗಳ ಪುರುಷರು ಮತ್ತು ಮಹಿಳೆಯರು ಸೇರಿದ್ದಾರೆ ಎಂದು ಅಬ್ದುಲ್ ಗಣ ಲುಕ್ಪಾಡಾ ಹೇಳಿದ್ದಾರೆ. 53 ಮಂದಿ ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದು, ಉಳಿದವರು ಸಾವನ್ನಪ್ಪಿರುವುದಾಗಿ ತಿಳಿಸಿದರು.
ಕ್ವಾರಾ ರಾಜ್ಯ ಸರ್ಕಾರವು ಸಂತ್ರಸ್ತರ ಕುಟುಂಬಗಳ ಜೊತೆ ಇರುವುದಾಗಿ ತಿಳಿಸಿದೆ. ಬದುಕುಳಿದವರನ್ನು ಹುಡುಕಲು ನಡೆಸಲಾಗುತ್ತಿರುವ ರಕ್ಷಣಾ ಪ್ರಯತ್ನಗಳನ್ನು ಅವರು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಸರ್ಕಾರದ ವಕ್ತಾರ ರಫಿಯು ಅಜಕಾಯೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.