ಇಂದಿನ ಜೀವನದಲ್ಲಿ ಜೀವನೋಪಾಯಕ್ಕಾಗಿ ಇಬ್ಬರೂ ಪತಿ-ಪತ್ನಿಯರೂ ಕೆಲಸ ಮಾಡುವುದು ಸಾಮಾನ್ಯವಾಗಿದೆ. ಅದಕ್ಕೇನೂ ತಪ್ಪಿಲ್ಲ. ಆದರೆ ಕೆಲವರಿಗೆ ದಿನದ ವೇಳೆ ಅಲ್ಲದೆ ರಾತ್ರಿ ಕೆಲಸ ಮಾಡುವ ಪರಿಸ್ಥಿತಿ ಬರುತ್ತದೆ. ಇಂಥವರ ದಿನದ ಚಕ್ರವನ್ನೇ ತಿರುಗಿಸಿಬಿಡ್ತದೆ. ಬೆಳಗ್ಗೆ ಮನೆಗೆ ಬಂದು ನಿದ್ರೆ ಮಾಡುವವರಿಗಾಗಿ ಊಟವೋ, ಸ್ನಾನ, ವ್ಯಾಯಾಮ ಯಾವ ಸಮಯವೋ ಸರಿಯಾಗಿ ಅಳವಡಿಸಲು ಬಹಳ ಕಷ್ಟವಾಗುತ್ತದೆ. ಆದರೆ ಈ ರಾತ್ರಿಯ ಕೆಲಸ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಎಷ್ಟೊಂದು ಗಂಭೀರ ಪರಿಣಾಮ ಬೀರುತ್ತದೆ ಎಂಬದು ಹೆಚ್ಚು ಜನರಿಗೆ ಗೊತ್ತಿಲ್ಲ.
ರಾತ್ರಿ ಪಾಳಿ ಕೆಲಸವು ನಮ್ಮ ದೇಹದ ನೈಸರ್ಗಿಕ ಗಂಟೆಗೆ ವಿರುದ್ಧವಾಗಿ ನಡೆಯುತ್ತೆ. ಇದು ನಿದ್ರೆಯ ನಿಯಮಿತ ಚಕ್ರವನ್ನು ಕೆಡಿಸುತ್ತೆ. ಹಾಗಾಗಿ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತೆ.
ಡಿಎನ್ಎ ಹಾನಿ ಆಗುವ ಸಾಧ್ಯತೆ
- ರಾತ್ರಿ ನಿದ್ರೆ ಮಾಡುವ ಸಮಯದಲ್ಲೇ ದೇಹ ಡಿಎನ್ಎ ಮರುಸಂರಚನೆ ಕಾರ್ಯ ಮಾಡುತ್ತದೆ. ಆದರೆ ರಾತ್ರಿ ಪಾಳಿ ಕೆಲಸ ಮಾಡುವವರಲ್ಲಿ ಈ ಪ್ರಕ್ರಿಯೆ ಸರಿಯಾಗಿ ನಡೆಯದು.
- ಅಧ್ಯಯನ ಪ್ರಕಾರ ಶೇ.30ರಷ್ಟು ಡಿಎನ್ಎ ಹಾನಿಯು ಹೆಚ್ಚು ಕಂಡುಬರುತ್ತದೆ.
- ನಿದ್ರೆಯ ಕೊರತೆಯಿಂದ ದೇಹದ ನವೀಕರಣ ಶಕ್ತಿ ಕುಗ್ಗುತ್ತದೆ.
ಟೈಪ್ 2 ಮಧುಮೇಹದ ಅಪಾಯ
- ಪದೇಪದೇ ಶಿಫ್ಟ್ ಬದಲಾಗುವವರು ಅಥವಾ ರಾತ್ರಿ ಕೆಲಸ ಮಾಡುವವರು ಟೈಪ್-2 ಮಧುಮೇಹಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು.
- ಅಧ್ಯಯನ ಪ್ರಕಾರ ಶೇ.44ರಷ್ಟು ಮಂದಿಗೆ ಈ ಮಧುಮೇಹದ ಅಪಾಯ ಇರುತ್ತದೆ.
- ಈ ಸಮಸ್ಯೆ ದಿನಪಾಳಿ ಕೆಲಸ ಮಾಡುವವರಿಗಿಂತ ಹೆಚ್ಚು ಗಂಭೀರವಾಗಿದೆ.
ಮಹಿಳೆಯರಲ್ಲಿ ಕ್ಯಾನ್ಸರ್ ಅಪಾಯ
- ರಾತ್ರಿ ಕೆಲಸ ಮಾಡುವ ಮಹಿಳೆಯರಲ್ಲಿ ಕೆಲವಿಧ ಕ್ಯಾನ್ಸರ್ ಗಳು ಉಂಟಾಗುವ ಸಾಧ್ಯತೆ ಅಧಿಕವಾಗಿದೆ.
- ಸ್ತನ ಕ್ಯಾನ್ಸರ್ ಅಪಾಯ – ಶೇ.32
- ಚರ್ಮದ ಕ್ಯಾನ್ಸರ್ – ಶೇ.41
- ಜಠರ ಕರುಳಿನ ಕ್ಯಾನ್ಸರ್ – ಶೇ.18
- ಪ್ರತೀ ಐದು ವರ್ಷಕ್ಕೊಮ್ಮೆ ಶೇ.3.3ರಷ್ಟು ಅಪಾಯ ಹೆಚ್ಚಾಗುತ್ತದೆ.
ಹೃದಯದ ಕಾಯಿಲೆಗಳ ಅಪಾಯ
- ದೀರ್ಘಕಾಲ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದವರಿಗೆ ಹೃದಯದ ಕಾಯಿಲೆಗಳು ಸಾಮಾನ್ಯ.
- 10 ವರ್ಷಗಳಷ್ಟು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದರೆ ಶೇ.15-18ರಷ್ಟು ಅಪಾಯ ಹೆಚ್ಚಾಗುತ್ತದೆ.
- ರಕ್ತದೊತ್ತಡ, ಧಮನಿಗಳ ತೊಂದರೆಗಳು ಹೆಚ್ಚಾಗಬಹುದು.
ಅರಿವಿನ ಶಕ್ತಿ ಮತ್ತು ಮೆದುಳಿನ ಸಮಸ್ಯೆ
- ರಾತ್ರಿ ಪಾಳಿಯ ಕೆಲಸ ಮಹಿಳೆಯರ ಮೆದುಳಿನ ಕಾರ್ಯಕ್ಷಮತೆಗೆ ತೊಂದರೆ ಉಂಟುಮಾಡುತ್ತದೆ.
- ಕಾಗ್ನಿಟಿವ್ ಫಂಕ್ಷನ್ (ಅರಿವಿನ ಶಕ್ತಿ) ಕಡಿಮೆಯಾಗುತ್ತದೆ.
- ಪುರುಷರಿಗಿಂತ ಮಹಿಳೆಯರಲ್ಲಿ ಈ ಪರಿಣಾಮ ಹೆಚ್ಚು ತೀವ್ರವಾಗಿರುತ್ತದೆ.
ರಾತ್ರಿ ಕೆಲಸ ಒಮ್ಮೆ ಜವಾಬ್ದಾರಿ ಎನಿಸಬಹುದು. ಆದರೆ ಅದೇ ದೇಹದ ಶತ್ರುವಾಗಿ ಪರಿಣಮಿಸಬಾರದು. ಸಮಯ ಬಂದಾಗ ವಿಶ್ರಾಂತಿ, ನಿದ್ರೆ, ಸಮತೋಲನ ಆಹಾರ, ವೈದ್ಯರ ತಪಾಸಣೆ—ಇವೆಲ್ಲವೂ ಅವಶ್ಯ. ದುಡಿಯೋಣ, ಆದರೆ ಆರೋಗ್ಯವಂತರಾಗಿರೋಣ.