ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಲೆಬ್ರಿಟಿಗಳು ಅದ್ಧೂರಿಯಾಗಿ ಮದುವೆಯಾಗಿ ಕೆಲವು ವರ್ಷಗಳ ನಂತರ ವಿಚ್ಛೇದನ ಪಡೆಯುವುದು ಸಾಮಾನ್ಯವಾಗಿದೆ. ಇದೀಗ ಮತ್ತೊಂದು ಜೋಡಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮೆಗಾ ಮಗಳು ನಿಹಾರಿಕಾ ಕೊನಿದೇಲ ಮತ್ತು ಜೊನ್ನಲಗಡ್ಡ ವೆಂಕಟ ಚೈತನ್ಯ ವಿಚ್ಛೇದನ ಪಡೆಯಲಿದ್ದಾರಂತೆ. ಡಿಸೆಂಬರ್ 9, 2020 ರಂದು ರಾಜಸ್ಥಾನದ ಉದಯಪುರದ ಒಬೆರಾಯ್ ಉದಯ್ ವಿಲಾಸ್‌ನಲ್ಲಿ ಮೆಗಾ ಮತ್ತು ಅಲ್ಲು ಕುಟುಂಬ ಮತ್ತು ಉದ್ಯಮದ ಅನೇಕ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆ ನಡೆದಿತ್ತು.
ಈ ಜೋಡಿಯನ್ನು ನೋಡಿದ ಮೆಗಾ ಅಭಿಮಾನಿಗಳು ಎಲ್ಲವೂ ಮುದ್ದಾಗಿದೆ ಎಂದು ಸಂಭ್ರಮಿಸಿದರು. ಆದರೆ ಅವರ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ. ಮದುವೆಯಾಗಿ ಒಂದೂವರೆ ವರ್ಷದ ಬಳಿಕ ಅವರು ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ವರದಿಗಳು ಬಂದಿದ್ದವು. ಕೂಡಲೇ ಚೈತನ್ಯ ಅವರು ನಿಹಾರಿಕಾ ಟ್ಯಾಗ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು ಅದು ನಿಜವಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ ಇತ್ತೀಚಿಗೆ ಇವರಿಬ್ಬರೂ ಮಾಡಿದ ಒಂದು ಕೆಲಸ ಮೆಗಾ ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ. ನಿಹಾರಿಕಾ ಮತ್ತು ಚೈತನ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದಾರೆ.
ಚೈತನ್ಯ ಮೆಗಾ ಫ್ಯಾಮಿಲಿಯಲ್ಲಿ ಎಲ್ಲರನ್ನೂ ಫಾಲೋ ಮಾಡುತ್ತಿದ್ದು, ನಿಹಾರಿಕಾಳನ್ನು ಮಾತ್ರ ಅನ್ ಫಾಲೋ ಮಾಡಿದ್ದಾರೆ. ಇದಲ್ಲದೆ, ಅವರು ತಮ್ಮ Instagram ನಿಂದ ಅವರ ಮದುವೆಯ ಫೋಟೋಗಳೊಂದಿಗೆ ನಿಹಾರಿಕಾ ಅವರೊಂದಿಗಿನ ಎಲ್ಲಾ ಫೋಟೋಗಳನ್ನು ಅಳಿಸಿದ್ದಾರೆ. ಇದರೊಂದಿಗೆ ಇವರಿಬ್ಬರೂ ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಮತ್ತು ಈ ಇಬ್ಬರು ನಿಜವಾಗಿಯೂ ಬೇರ್ಪಡುತ್ತಿದ್ದಾರೆಯೇ? ಸ್ಪಷ್ಟತೆ ಬೇಕಿದೆ.