ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸೋಮವಾರ ಸಂಸತ್ನಲ್ಲಿ 2023-24ರ ಸಾಲಿನ ಆರ್ಥಿಕ ಸಮೀಕ್ಷೆ ವರದಿ ಪ್ರಸ್ತುತಪಡಿಸಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಲೋಕಸಭೆಯಲ್ಲಿ, ಮತ್ತು 2 ಗಂಟೆಗೆ ರಾಜ್ಯಸಭೆಯಲ್ಲಿ ಈ ವರದಿಯನ್ನು ಮಂಡನೆ ಮಾಡಲಿದ್ದಾರೆ. ನಾಳೆ ಮಂಗಳವಾರ ಕೇಂದ್ರ ಬಜೆಟ್ ಮಂಡನೆ ಆಗಲಿದೆ.
ಬಜೆಟ್ ಮಂಡನೆಗೆ ಒಂದು ದಿನ ಆರ್ಥಿಕ ಸಮೀಕ್ಷೆ ವರದಿಯನ್ನು ಪ್ರಸ್ತುತಪಡಿಸಲಾಗುತ್ತದೆ. ಇದು ಬಜೆಟ್ನ ಪೂರ್ವಭಾವಿ ಆರ್ಥಿಕ ಅವಲೋಕನದ ದಾಖಲೆಯಾಗಿರುತ್ತದೆ. ದೇಶದ ಒಟ್ಟಾರೆ ಆರ್ಥಿಕ ಚಿತ್ರಣ ಹೇಗಿದೆ ಎಂಬುದನ್ನು ಈ ಸಮೀಕ್ಷೆ ಸುಳಿವು ನೀಡುತ್ತದೆ.